ಬಿಳಿಸುಳಿ ರೋಗ ನಿಯಂತ್ರಣಕ್ಕೆ ವಿಸ್ತೃತ ವರದಿ
Jun 25 2025, 12:33 AM ISTಬಿಳಿಸುಳಿ ರೋಗ ವೀಕ್ಷಣೆಗೆ ಕೇಂದ್ರದ ವಿಜ್ಞಾನಿಗಳ ತಂಡ ಜಿಲ್ಲೆಯ ಆಲೂರು, ಹೊಳೆನರಸೀಪುರ, ಅರಕಲಗೂಡು, ಬೇಲೂರು ತಾಲೂಕುಗಳಲ್ಲಿ ಆಯ್ದ ಭಾಗಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿರುವ ತಂಡದೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಳಿಸುಳಿ ರೋಗ ನಿಯಂತ್ರಿಸಲು ಅಧ್ಯಯನಕ್ಕಾಗಿ ತಜ್ಞರ ತಂಡವನ್ನು ಜಿಲ್ಲೆಗೆ ಕಳುಹಿಸಿಕೊಡುವಂತೆ ಕೇಂದ್ರ ಕೃಷಿ ಸಚಿವರಲ್ಲಿ ಮನವಿ ಮಾಡಿಲಾಗಿತ್ತು. ಅದರಂತೆ ತಜ್ಞರ ತಂಡದವರು ಜಿಲ್ಲೆಯ ವಿವಿಧ ಆಯ್ದ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ ಎಂದರು.