ಅಕ್ರಮ ಭೂ ಪರಭಾರೆ: ಇಂಡಿ ಉಪನೋಂದಣಾಧಿಕಾರಿ ವಿರುದ್ಧ ವರದಿ ಸಲ್ಲಿಕೆ
Jun 19 2024, 01:03 AM ISTಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ಬೇರೆಯವರಿಗೆ ಪರಭಾರೆ ಮಾಡಿದ್ದ ಇಂಡಿ ತಾಲೂಕಿನ ಹಂಜಗಿ ಪಿಡಿಒ ಹಾಗೂ ನಿಯಮ ಪಾಲಿಸದೇ ಅದನ್ನು ಖರೀದಿ ಹಾಕಿ ಕೊಟ್ಟಿದ್ದ ಉಪನೋಂದಣಾಧಿಕಾರಿ ಪ್ರಕರಣದಲ್ಲಿ ಶಾಮೀಲಾಗಿರುವ ಕುರಿತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದಾರೆ. ಈ ಕುರಿತು ಕನ್ನಡಪ್ರಭ ಜೂ.12ರಂದು ವಿಸ್ತೃತ ವರದಿ ಪ್ರಕಟಿಸಿತ್ತು. ವರದಿ ಆಧಾರದ ಮೇಲೆ ಇದೀಗ ಇಂಡಿ ಉಪನೋಂದಣಾಧಿಕಾರಿ ಮೇಲೆ ಕ್ರಮಕ್ಕೆ ಸರ್ಕಾರ ಮುಂದಾಗಿದೆ.