ಕೃಷಿಗೆ 7 ತಾಸು ವಿದ್ಯುತ್ ಪೂರೈಕೆಗೆ ಬೆಸ್ಕಾಂ ಬದ್ಧ: ಎಂಡಿ ಮಹಾಂತೇಶ ಬೀಳಗಿ
Jan 08 2024, 01:45 AM ISTಮುಂಗಾರು ಮಳೆ ಕೊರತೆಯಿಂದ ಡ್ಯಾಂಗಳಲ್ಲಿ ನೀರು ಸಂಗ್ರಹ ಕಡಿಮೆಯಾಗಿದೆ. ರೈತರ ಪಂಪ್ಸೆಟ್ ಮೇಲೆಯೇ ಜೂನ್ನಿಂದಲೇ ಅವಲಂಬಿತವಾದ್ದರಿಂದ ತೀವ್ರ ವಿದ್ಯುತ್ ಕೊರತೆ ಎದುರಿಸಬೇಕಿದೆ. ಕೊರತೆ ನೀಗಿಸಲು ಈಗಾಗಲೇ ಜಿಂದಾಲ್, ಸಕ್ಕರೆ ಕಾರ್ಖನೆಗಳು, ಯುಪಿಸಿಎಲ್, ಸೋಲಾರ್, ವಿಂಡ್ ಮಿಲ್ ಮೂಲಕ ವಿದ್ಯುತ್ ಖರೀದಿ ಮಾಡಲಾಗುತ್ತದೆ. ಈಗ ಯಾವುದೇ ರೀತಿ ವಿದ್ಯುತ್ ಕೊರತೆಯಾಗದಂತೆ ವಿದ್ಯುತ್ ಪೂರೈಸಲಾಗುತ್ತಿದೆ.