ಬಂಟ್ವಾಳ: ವಿಧಾನ ಪರಿಷತ್ ಚುನಾವಣೆ ಶಾಂತಿಯುತ
Jun 04 2024, 12:30 AM ISTವಿಧಾನ ಪರಿಷತ್ ಸ್ಥಾನಗಳಿಗೆ ಮಂಗಳವಾರ ಮತದಾನ ಬಂಟ್ವಾಳದಲ್ಲಿ ಶಾಂತಿಯುತವಾಗಿ ನಡೆದಿದ್ದು, ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ೮೩ ಶೇ. ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ೭೪ ಶೇ. ಮತದಾನವಾಗಿದೆ. ತಾಲೂಕಿನಲ್ಲಿ 3487 ಪದವೀಧರ ಮತದಾರರಿದ್ದು ಈ ಪೈಕಿ ೨೫೯೮ ಮತದಾರರು ಮತ ಚಲಾಯಿಸಿದ್ದರೆ, ಶಿಕ್ಷಕರ ಕ್ಷೇತ್ರದ. 961 ಶಿಕ್ಷಕ ಮತದಾರರ ಪೈಕಿ ೭೪೪ ಶಿಕ್ಷಕರು ಮತದಾನ ಮಾಡಿದ್ದಾರೆ.