ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣದ ವ್ಯಾಮೋಹದಿಂದ ಹೊರಬನ್ನಿ: ಕೆ.ಬಿ.ಚಂದ್ರಶೇಖರ್
May 12 2024, 01:16 AM ISTಶಿಕ್ಷಣ ಎಂದರೆ ಕೇವಲ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಎನ್ನುವ ಭ್ರಮೆಗೆ ನಮ್ಮ ಪೋಷಕರು ಮತ್ತು ವಿದ್ಯಾರ್ಥಿಗಳು ಒಳಗಾಗಿದ್ದಾರೆ. ಇದರಿಂದ ಹೊರಬೇಕು. ಪದವಿ ಶಿಕ್ಷಣದಲ್ಲಿ ಲೋಕ ಜ್ಞಾನವಿದೆ. ಅಧ್ಯಾಪಕ ವೃತ್ತಿಯಿಂದ ಹಿಡಿದು ಕೆಎಎಸ್, ಐಎಎಸ್, ಐಪಿಎಸ್ ಪರೀಕ್ಷೆಗಳು ಸೇರಿದಂತೆ ಎಲ್ಲ ಸಾಮಾನ್ಯ ಜ್ಞಾನದ ಪರೀಕ್ಷೆಗಳನ್ನು ಎದುರಿಸುವ ತಾಕತ್ತು ನಮ್ಮ ವಿದ್ಯಾರ್ಥಿಗಳಿಗೆ ಪದವಿ ಕಲಿಕೆಯಿಂದ ಬರುತ್ತದೆ.