ವೈದ್ಯಕೀಯ ಕ್ಷೇತ್ರದ ಬದಲಾವಣೆಗಳಿಗೆ ಹೊಂದಿಕೊಳ್ಳಿ: ಡಾ.ಗಜಾನನ್ ಹೆಗಡೆ
Jan 26 2024, 01:51 AM ISTಬಾಗಲಕೋಟೆ: ನಗರದ ಎಂಆರ್ ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆದ 2023-24ನೇ ಸಾಲಿನ ಬಿಎಎಂಎಸ್ ಹಾಗೂ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಆರ್ ಜಿಯುಎಚ್ಎಸ್ ನ ಸಿಂಡಿಕೇಟ್ ಸದಸ್ಯ ಡಾ.ಗಜಾನನ್ ಹೆಗಡೆ ಮಾತನಾಡಿ, ಬದಲಾದ ವೈದ್ಯಕೀಯ ವಿಧಾನಗಳಲ್ಲಿ ಆಯುರ್ವೇದ ಪದ್ಧತಿ ದೇಶದಲ್ಲಿಯೇ ಎರಡನೇ ಸ್ಥಾನ ಪಡೆದಿದೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರದಲ್ಲಿನ ಬದಲಾವಣೆಗಳಿಗೆ ತಕ್ಕಂತೆ ಹೊಂದಿಕೊಂಡು ಹೋದರೆ ಯಶಸ್ಸನ್ನು ಸಾಧಿಸಬಹುದು ಎಂದರು.