ಶಿಕ್ಷಣ ಸಂಸ್ಕೃತಿ, ಸದ್ಗುಣ, ಸಂಸ್ಕಾರಗಳ ಸಮ್ಮಿಲನ: ಚಂದ್ರಶೇಖರ್
Nov 18 2024, 12:02 AM ISTಚಿಂತನೆ ಇಲ್ಲದೆ ಯಾವುದೂ ಅರಳುವುದಿಲ್ಲ. ಚಿಂತನೆ, ಯೋಜನೆ, ಯೋಚನೆಗಳಿಂದ ಎಲ್ಲರೂ ಕ್ರಿಯಾಶೀಲರಾಗಿ ಸಮಾಜ ಕಟ್ಟುವಲ್ಲಿ ಸಕ್ರಿಯರಾಗಬೇಕಿದೆ. ಸಮಾಜದಲ್ಲಿನ ಕೊರತೆಗಳ ಬಗ್ಗೆ ಟೀಕಿಸುತ್ತಾ, ಕೊರಗುತ್ತಾ ಕೂರುವ ಬದಲು, ಒಂದಿಷ್ಟು ಕೈಗಳು ಒಂದಾಗಿ ದುಡಿದರೆ ನಮ್ಮ ಸುತ್ತಲಿನ ವ್ಯವಸ್ಥೆಯನ್ನು ಬದಲಿಸಿ, ಸರಿಪಡಿಸಿ ಸುಂದರಗೊಳಿಸಬಹುದು. ಕತ್ತಲೆಯನ್ನು ಶಪಿಸುವ ಬದಲು ಪುಟ್ಟ ಹಣತೆ ಬೆಳಗುವ ಸಂಕಲ್ಪ ಮಾಡಬೇಕಿದೆ.