ಸಚಿವ ರಾಜಣ್ಣ ಬಗ್ಗೆ ಮಾತನಾಡಲು ರಂಗಸ್ವಾಮಿಗೆ ನೈತಿಕತೆ ಇಲ್ಲ
Jan 12 2025, 01:16 AM ISTಹಿರಿಯರಾದ ಉಸ್ತುವಾರಿ ಸಚಿವರು, ೪-೫ ಬಾರಿ ಶಾಸಕರಾಗಿ ನೇರ ನುಡಿಯುವಂತಹ, ನಿರಂತರವಾಗಿ ಜಿಲ್ಲೆಯಲ್ಲಿ ಎಲ್ಲರ ಸಂಪರ್ಕ ಹೊಂದಿರುವಂತಹ ಉಸ್ತುವಾರಿ ಸಚಿವರ ಬಗ್ಗೆ ಮಾತನಾಡಲು ಪರಾಜಿತ ಅಭ್ಯರ್ಥಿ ರಂಗಸ್ವಾಮಿಗೆ ಯಾವ ನೈತಿಕತೆ ಇದೆ ಎಂದು ಕಾಂಗ್ರೆಸ್ ಮುಖಂಡ ಚಂದ್ರು ಪ್ರಶ್ನೆ ಮಾಡಿ ಸಿಡಿಮಿಡಿಗೊಂಡರು. ಇವರು ಉಸ್ತುವಾರಿ ಸಚಿವರ ಬಳಿಯೂ ಹೋಗಿಲ್ಲ, ಕಾರ್ಯಕರ್ತರನ್ನು ಸಭೆಗೂ ಆಹ್ವಾನಿಸದೆ ಸುಮ್ಮನೆ ಉಸ್ತುವಾರಿ ಸಚಿವರ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದರು.