ಶಿರಾಡಿ ಘಾಟ್‌ಗೆ ಸಚಿವ ಕೃಷ್ಣಭೈರೇಗೌಡ ಭೇಟಿ
Aug 01 2024, 12:17 AM IST ಸಕಲೇಶಪುರ ತಾಲೂಕಿನ ಮಳೆಹಾನಿ ಪ್ರದೇಶಗಳನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ ವೀಕ್ಷಣೆ ಮಾಡಿದರು. ನಂತರ ಮಾತನಾಡಿ ಕೇರಳದಲ್ಲಿ ಆದ ಘಟನೆಯಂತೆ ನಮ್ಮಲ್ಲೂ ಕೂಡ ಆಗಬಾರದು ಎಂದು ಹಲವಾರು ಮುನ್ನೆಚ್ಚರಿಕೆ ವಹಿಸಿದ್ದೇವೆ ಎಂದು ಹೇಳಿದರು. ಶಿರಾಡಿ ಬಳಿ ತಡೆಗೋಡೆಗಳನ್ನು ಎತ್ತರದಲ್ಲಿ ಕಟ್ಟಬೇಕಿತ್ತು ಆದರೆ ಕಟ್ಟಿಲ್ಲ. ಮತ್ತೆ ಕೆಲವು ಕಡೆ ರಸ್ತೆಗಳನ್ನು ಎತ್ತರ ಮಾಡಲಾಗಿದ್ದು ಇಂತಹ ಕಡೆ ರಸ್ತೆ ಬದಿಯಲ್ಲಿ ಆರ್.ಸಿ.ಸಿ ಹಾಕುವ ಬದಲು ಕಲ್ಲಿನಿಂದ ತಡೆಗೋಡೆ ಕಟ್ಟಿದ್ದಾರೆ, ಇದು ತಡೆಯುವುದಿಲ್ಲ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಂಸ್ಥೆಗೆ ರಾಜ್ಯದ ಕೆಲವು ಹೆದ್ದಾರಿಗಳಲ್ಲಿ ಸರ್ವೆ ಮಾಡಲು ಹೇಳಿದ್ದೇನೆ. ಏಕೆಂದರೆ ರಸ್ತೆ ಡಿಸೈನ್‌ನಲ್ಲಿ ಬದಲಾವಣೆ ಬೇಕಾಗಿದೆ. ಭವಿಷ್ಯದಲ್ಲಿ ಯಾವುದೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದರು.