ಇಳಿ ವಯಸ್ಸಿನಲ್ಲಿ ಯಡಿಯೂರಪ್ಪ ಮೇಲೆ ಸುಳ್ಳು ಕೇಸು ಹಾಕಿ, ಅವರನ್ನು ಕೆಣಕಿ ನೋವು ಕೊಟ್ಟಿದ್ದೀರಿ. ನಮ್ಮ ಆಸ್ತಿ ಕೇಳಿ ನನ್ನನ್ನು ಕೆರಳಿಸಿದ್ದೀರಿ. ನಾನು ನನ್ನ ಕುಟುಂಬದ ಆಸ್ತಿ ಬಗ್ಗೆ ಯಾವ ತನಿಖೆಗೂ ಸಿದ್ಧನಿದ್ದೇನೆ - ಕುಮಾರಸ್ವಾಮಿ
ತನಿಖೆ ಮಾಡಲು ಒಂದು ಸಿಬಿಐ, ಇಡಿ ಸಾಕಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆ ಮಾಡಲು ಸಿಬಿಐ, ಇ.ಡಿ. ಸಾಕಾಗುವುದಿಲ್ಲ. ಡಿಕೆಶಿ ನಿಮ್ಮ ಬಳಿ ಏನಿತ್ತು?. ಬ್ಲ್ಯಾಕ್ ಆ್ಯಂಡ್ ವೈಟ್ ಟಿವಿ, ವಿಸಿಆರ್‌ನಿಂದ ಜೀವನ ಪ್ರಾರಂಭಿಸಿದ ನೀವು, ಯಾವ ರೀತಿ ನಡೆದುಕೊಂಡಿದ್ದೀರಿ?. ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ