ನೀರು ಸರಬರಾಜು ನೌಕರರ ಬೇಡಿಕೆ ಈಡೇರಿಸದ ಸರ್ಕಾರ

Oct 04 2025, 12:00 AM IST
ನೌಕರರ ಬೇಡಿಕೆಗಳಲ್ಲಿ ನೇರ ನೇಮಕಾತಿ, ನೇರ ಪಾವತಿ ಮತ್ತು ಸೇವಾಭದ್ರತೆ ಪ್ರಮುಖವಾಗಿದ್ದು, ಹಲವು ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು ಸರ್ಕಾರ ಇನ್ನೂ ಭರ್ತಿ ಮಾಡಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಇದುವರೆಗೆ ಯಾವಾಗಲೂ ಮುಷ್ಕರ ಕೈಗೊಂಡಿರದ ನೌಕರರು, ಸರ್ಕಾರದ ವಿಳಂಬ ಧೋರಣೆಯಿಂದ ಬೇಸತ್ತು ಈ ಬಾರಿ ಹೋರಾಟಕ್ಕೆ ಇಳಿಯುತ್ತಿದ್ದೇವೆ. ಸಮುದಾಯದ ನೀರಿನ ಪೂರೈಕೆ ಎಂಬ ಅತಿ ಮೂಲಭೂತ ಸೇವೆ ನಿರ್ವಹಿಸುತ್ತಿರುವ ನೌಕರರ ಬೇಡಿಕೆಗಳನ್ನು ತಕ್ಷಣವೇ ಸರ್ಕಾರ ಪರಿಗಣಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈಗಾಗಲೇ ೬೦ ಸಾವಿರ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದಾರೆ. ಹಲವಾರು ಬಾರಿ ಹಿಂದಿನ ಸರ್ಕಾರಕ್ಕೆ ಮನವಿ ಮಾಡಿದ್ದೆವು, ಈಗಿರುವ ಪೌರಾಡಳಿತ ಸಚಿವರಲ್ಲಿ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ ಎಂದರು.

ಸರ್ಕಾರ ಹಂಪಿ ಮಾದರಿಯಂತೆ ಹೊಯ್ಸಳ ಉತ್ಸವ ನಡೆಸಲಿ

Sep 29 2025, 01:03 AM IST
ಹೊಯ್ಸಳರ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸಲು ಹಾಗೂ ಹಂಪಿಯ ಮಾದರಿಯಲ್ಲಿ ಪ್ರತಿವರ್ಷ ಹೊಯ್ಸಳ ಉತ್ಸವವನ್ನು ಜಿಲ್ಲೆಯಲ್ಲಿ ಸರ್ಕಾರದ ಪ್ರೋತ್ಸಾಹದೊಂದಿಗೆ ಆಚರಿಸಬೇಕೆಂದು ಒತ್ತಾಯಿಸಿ ನವಕರ್ನಾಟಕ ಯುವಶಕ್ತಿ ವತಿಯಿಂದ ಭಾನುವಾರ ಹಾಸನದಲ್ಲಿ ಭವ್ಯ ಹೊಯ್ಸಳ ಉತ್ಸವ ಮೆರವಣಿಗೆ ನಡೆಯಿತು. ೧೧ ಶತಮಾನದಿಂದ ೧೬ನೇ ಶತಮಾನದವರೆಗೂ ಕನ್ನಡಿಗರು ಹೆಮ್ಮೆಪಡುವ ರೀತಿಯಲ್ಲಿ ಪಕ್ಕದ ತಮಿಳುನಾಡು ಮತ್ತು ಆಂಧ್ರ ಸೇರಿದಂತೆ ದಕ್ಷಿಣ ಭಾರತದಲ್ಲಿ ನಮ್ಮ ಕನ್ನಡಿಗರ ಹಿರಿಯ ಗರಿಮೆಯನ್ನು ಎತ್ತಿ ಹಿಡಿದಂತಹ ಹೊಯ್ಸಳರು ನಮಗೆ ಅನೇಕ ಕೊಡುಗೆಯನ್ನು ಕೊಟ್ಟು ಹೋಗಿದ್ದಾರೆ, ಕನ್ನಡಿಗರಾದ ನಾವು ಹೆಮ್ಮೆ ಪಡುವಂತಹ ಕೊಡುಗೆ ಹೊಯ್ಸಳರದ್ದು ಎಂದು ಬಣ್ಣಿಸಿದರು.