ಶ್ರವಣಬೆಳಗೊಳ ಮಠದ ಕಲಾಕೃತಿಗಳ ಬಣ್ಣ ರಕ್ಷಣೆಗೆ ಸರ್ಕಾರ ಸಿದ್ಧ

Jul 10 2025, 12:46 AM IST
ಚಾತುರ್ಮಾಸ ಕಾರ್ಯಕ್ರಮ ಇಂದಿನಿಂದ ಪ್ರಾರಂಭವಾಗುತ್ತದೆ. ಈ ಪವಿತ್ರ ದಿನ ಇಲ್ಲಿಗೆ ಬರಬೇಕು. ಪೂಜ್ಯರ ವಿಗ್ರಹ ದರ್ಶನ ಮಾಡಲು ಬಂದಿದ್ದೆ. ಈ ಐತಿಹಾಸಿಕ ಮಠದಲ್ಲಿ ಅದ್ಭುತವಾದ ಕಲೆ‌ ನೋಡಲು ಸಾಧ್ಯವಾಗುತ್ತದೆ. ಒಂದು ಸಾವಿರ ವರ್ಷಗಳ ಹಿಂದೆ ಕಲಾಕೃತಿಗಳು, ಕಲೆ ಈ ಮಠದಲ್ಲಿವೆ ಎಂದು ಎಂದು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ಸ್ವಾಮೀಜಿಯವರು ಅವುಗಳನ್ನು ರಕ್ಷಣೆ ಮಾಡಲು ರಾಜ್ಯ ಸರ್ಕಾರಕ್ಕೆ ಕೊಟ್ಟರೆ ಅವನ್ನ ಪ್ರೊಟೆಕ್ಟೆಡ್ ಪೈಂಟ್ಸ್ ಅಂತ ಮಾಡಲು ನಾವು ಪ್ರಯತ್ನ ಮಾಡುತ್ತೇವೆ ಇಲ್ಲವಾದರೆ ಅವನ್ನು ಪ್ರೊಟೆಕ್ಟ್ ಹೇಗೆ ಮಾಡಬಹುದು ಎಂದು ಯೋಜನೆ ಮಾಡಿ, ಆ ಯೋಜನೆ ಅನುಷ್ಠಾನ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.