ದುರ್ಬಲರ ಸಾಮಾಜಿಕ ಭದ್ರತೆಗೆ ಮೂಲಸೌಲಭ್ಯ ಕಲ್ಪಿಸಿ
Feb 24 2025, 12:34 AM ISTಕನ್ನಡಪ್ರಭ ವಾರ್ತೆ ವಿಜಯಪುರ ನವ, ಉದಾರವಾದಿ ಜಗತ್ತಿನಲ್ಲಿ ದುರ್ಬಲರಿಗೆ ಸಾಮಾಜಿಕ ಭದ್ರತೆ ಕಡಿಮೆಯಾಗಿದ್ದು, ಅವರ ಏಳಿಗೆಗಾಗಿ ಪಿಂಚಣಿ, ಆರೋಗ್ಯ ರಕ್ಷಣೆ, ಆರ್ಥಿಕ ಸಬಲತೆಗಾಗಿ, ಮೂಲಭೂತ ಅವಶ್ಯಕತೆ ಒದಗಿಸಿ. ಸಾಮಾಜಿಕ ಅಸಮಾನತೆ ನೀಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಅವುಗಳ ಮೌಲ್ಯಮಾಪನಕ್ಕೆ ಸಾಮಾಜಿಕ ನ್ಯಾಯ ದಿನಾಚರಣೆ ಅತ್ಯವಶ್ಯಕ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಾಹುಲ್ ಡೊಂಗ್ರೆ ಹೇಳಿದರು.