30ರಂದು ವೃತ್ತಿಪರ ಸಾಮಾಜಿಕ ಕಾರ್ಯಕರ್ತರ ಪತ್ರ ಚಳವಳಿ
Sep 24 2024, 02:01 AM ISTವೃತ್ತಿಪರ ಸಾಮಾಜಿಕ ಕಾರ್ಯಕರ್ತರಾದ ನಾವು ಮಾಸ್ಟರ್ ಆಫ್ ಸೋಶಿಯಲ್ ವರ್ಕರ್ (ಎಂಎಸ್ಡಬ್ಲ್ಯೂ) ಸ್ನಾತಕೋತ್ತರ ಪದವಿಯನ್ನು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ 2 ವರ್ಷಗಳವರೆಗೂ ಅಭ್ಯಾಸ ಮಾಡಿ ಪಡೆದಿರುತ್ತೇವೆ. ಜೊತೆಗೆ ಕಾರ್ಯಕ್ಷೇತ್ರದಲ್ಲೂ ಹೋಗಿ ಅಭ್ಯಾಸ ಮಾಡಿರುತ್ತೇವೆ. ಆದರೆ, ಇದುವರೆಗೂ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಕರ್ನಾಟಕ ರಾಜ್ಯ ವೃತ್ತಿಪರ ಸಾಮಾಜಿಕ ಕಾರ್ಯಕರ್ತರ ಸಂಘ ರಾಜ್ಯಾಧ್ಯಕ್ಷ ಡಾ. ಎಂ.ಸಂತೋಷಕುಮಾರ ದಾವಣಗೆರೆಯಲ್ಲಿ ಹೇಳಿದ್ದಾರೆ.