ಸಾಮಾಜಿಕ ಕೈಂಕರ್ಯದಿಂದ ವ್ಯಕ್ತಿತ್ವ ಜೀವಂತ: ಬಿ.ಎನ್.ಚಂದ್ರಪ್ಪ
Jan 10 2025, 12:47 AM ISTತರೀಕೆರೆ, ಸಮಾಜಕ್ಕೆ ನೀಡಿದ ಕೊಡುಗೆಗಳಿಂದ ವ್ಯಕ್ತಿಯ ವ್ಯಕ್ತಿತ್ವ ಜೀವಂತವಾಗಿರುತ್ತದೆ ಎಂದು ಚಿತ್ರದುರ್ಗ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕಸಾಪ ಆಶ್ರಯದಲ್ಲಿ ಪಟ್ಟಣದ ಶ್ರೀ ತುಂಗಭದ್ರಾ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ನಡೆದ ದತ್ತಿ ಉಪನ್ಯಾಸ , ಚಂದ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇದೊಂದು ಹೃದಯಸ್ಪರ್ಶಿ ಸಮಾರಂಭ ಎಚ್. ಚಂದ್ರಪ್ಪ ಅವರ ಕೊಡುಗೆ ಹಾಗೂ ಶ್ರಮದಿಂದ ಶ್ರೀ ತುಂಗಭದ್ರಾ ಶಿಕ್ಷಣ ಮಹಾ ವಿದ್ಯಾಲಯ ಕಾಲೇಜು ಹಂತಕ್ಕೆ ತಲುಪಿದೆ.