ಷಡಕ್ಷರ ದೇವರ ಹೆಸರಲ್ಲಿ ಸಾಹಿತ್ಯ ಸೇವೆಗೆ ಸಂಕಲ್ಪ
Feb 04 2025, 12:33 AM ISTಚನ್ನಪಟ್ಟಣ: ರಾಷ್ಟ್ರಕವಿ ಕುವೆಂಪು ನಾಡಗೀತೆಯಲ್ಲಿ "ರನ್ನ ಷಡಕ್ಷರ ಪೊನ್ನ " ಎಂದು ಬಣ್ಣಿಸಲ್ಪಟ್ಟಿರುವುದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಧನಗೂರು ಷಡಕ್ಷರ ದೇವ ಕವಿ ೧೬-೧೭ನೇ ಶತಮಾನದಲ್ಲಿ ಕವಿತೆಗಳಿಂದ ಕನ್ನಡ ಸಾಹಿತ್ಯ ಬೆಳಗಿದವರು. ಈ ನಿಟ್ಟಿನಲ್ಲಿ ಷಡಕ್ಷರ ದೇವರ ಹೆಸರು ಉಳಿಸಲು ಷಡಕ್ಷರ ಪೀಠ ಸ್ಥಾಪಿಸಿ, ಸಾಹಿತ್ಯ, ಶೈಕ್ಷಣಿಕ ಹಾಗೂ ಸಾಮಾಜಿಕ ಕೆಲಸ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದು ಧನಗೂರು ಷಡಕ್ಷರ ಪೀಠದ ಅಧ್ಯಕ್ಷ ಡಾ.ಕೂಡ್ಲೂರು ವೆಂಕಟಪ್ಪ ಹೇಳಿದರು.