ಷರತ್ತುಗಳ ಹಾಕಿ ಬಿಜೆಪಿಗೆ ಮರಳಿಲ್ಲ: ಮಾಜಿ ಸಿಎಂ ಜಗದೀಶ ಶೆಟ್ಟರ್
Jan 29 2024, 01:34 AM ISTಯಾವುದೇ ಷರತ್ತು ಹಾಕಿ, ಬೇಡಿಕೆಗಳ ಇಟ್ಟು ನಾನು ಬಿಜೆಪಿಗೆ ಮರಳಿಲ್ಲ. ನರೇಂದ್ರ ಮೋದಿಯವರ ಮೂರನೇ ಬಾರಿಗೆ ಪ್ರಧಾನಿ ಮಾಡಲು ನನ್ನೊಂದು ಅಳಿಲು ಸೇವೆ ಇರಬೇಕೆಂಬ ಕಾರಣಕ್ಕಾಗಿ ಸ್ವಪಕ್ಷಕ್ಕೆ ಮರಳಿದ್ದೇನೆ. ಬಿಜೆಪಿಗೆ ನಾನು ಮರಳಬೇಕೆಂದು ಕಳೆದ ಐದಾರು ತಿಂಗಳಿನಿಂದಲೂ ಕಾರ್ಯಕರ್ತರ ಪಡೆ ಹಾಗೂ ಪಕ್ಷದ ವರಿಷ್ಠರ ಒತ್ತಡವಿತ್ತು. ಕೇಂದ್ರದ ನಾಯಕರು ನನ್ನೊಂದಿಗೆ ಚರ್ಚಿಸಿದರು. ಹಾಗಾಗಿ ಬಿಜೆಪಿಗೆ ಮರಳಿ, ಮಾತೃ ಪಕ್ಷಕ್ಕೆ ಬಂದ ಖುಷಿ ಇದೆ.