ಗಾಂಧಿ ಹೇಳಿದ ರಾಮನ ಭಜನೆ ಮಾಡುತ್ತೇವೆ: ಸಿಎಂ
Jan 25 2024, 02:00 AM IST‘ ನಾನು ಕೂಡ ಬೆಂಗಳೂರಿನಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದ್ದೇನೆ. ಜೈ ಶ್ರೀರಾಮ್ ಘೋಷಣೆಯನ್ನು ಕೂಗಿಸಿದ್ದೇನೆ, ನಾವು ಗಾಂಧಿ ಹೇಳಿದ ರಾಮನ ಭಜನೆ ಮಾಡುತ್ತೇವೆ. ನನ್ನ ಹೆಸರು ಸಿದ್ಧರಾಮ. ನನ್ನ ಹೆಸರಲ್ಲೇ ರಾಮ ಇದ್ದಾನೆ. ತಮ್ಮಂದಿರ ಹೆಸರು ರಾಮೇಗೌಡ, ಸಿದ್ದೇಗೌಡ, ಸಿದ್ದರಾಮೇಗೌಡ. ಹಾಗಿದ್ದರೆ, ನಾವ್ಯಾರೂ ಹಿಂದುಗಳು ಅಲ್ವೇ?‘ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.