ಪರಿಶಿಷ್ಟರಿಗೆ ಸಿಎಂ ಹುದ್ದೆ ವಿಚಾರ ಈಗ ಅಪ್ರಸ್ತುತ: ಸಚಿವ ಕೆ.ಎನ್.ರಾಜಣ್ಣ
Jan 10 2024, 01:46 AM ISTಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಹಾಗಾಗಿ ಪರಿಶಿಷ್ಟರಿಗೆ ಮುಖ್ಯಮಂತ್ರಿ ಹುದ್ದೆ ವಿಚಾರ ಅಪ್ರಸ್ತುತ. ಈಗ ಡಿಸಿಎಂ ಹುದ್ದೆಗಳು ಮಾತ್ರ ಖಾಲಿ ಇದ್ದು, ಯಾರು ಬೇಕಾದರೂ ಉಪ ಮುಖ್ಯಮಂತ್ರಿ ಆಗಬಹುದು. ಸಿಎಂ ಹುದ್ದೆ ಖಾಲಿಯಾದ ಮೇಲೆ ಪರಿಶಿಷ್ಟರ ಮಾಡಬೇಕಾ, ಅಲ್ಪಸಂಖ್ಯಾತರ ಮಾಡಬೇಕಾ, ಹಿಂದುಳಿದವರಿಗೆ ಸಿಎಂ ಮಾಡಿ ಅವಕಾಶ ನೀಡಬೇಕಾ ಎಂಬ ತೀರ್ಮಾನವಾಗುತ್ತದೆ.