ಸಿಎಂ ಸಾಹೇಬ್ರಿಗೆ ಕರೆದಿಲ್ಲ, ನಾವು ಶ್ರೀರಾಮನಿಗೆ ಇಲ್ಲಿಂದಲೇ ಕೈ ಮುಗಿತೀವಿ

Jan 04 2024, 01:45 AM IST
ಬಹುದೊಡ್ಡ ಸಂಘರ್ಷಗಳ ಇತಿಹಾಸ ಹೊಂದಿರುವ ಅಯೋಧ್ಯೆ ಶ್ರೀ ರಾಮಮಂದಿರ ಉದ್ಘಾಟನೆ, ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಮಂತ್ರಿಸಿಲ್ಲ. ಇದರಿಂದ ಕಾಂಗ್ರೆಸ್‌ ಜನನಾಯಕರಲ್ಲಿ ಮುನಿಸು ಇಲ್ಲದಿಲ್ಲ. ಏಕೆಂದರೆ, ಶಿವಮೊಗ್ಗದಲ್ಲಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, "ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಸಾಹೇಬ್ರಿಗೆ ಕರೆದಿಲ್ಲ ಎಂದರೆ ಬೇಡ. ನಾವು ಎಲ್ಲಿರುತ್ತೇವೆಯೋ, ಅಲ್ಲಿಂದಲೇ ಓ ರಾಮ ಕಾಪಾಡಪ್ಪ ಅಂತ ಕೈ ಮುಗಿತೀವಿ, ಅದರಲ್ಲಿ ತಪ್ಪೇನಿದೆ.. " ಎಂದು ಹೇಳಿರುವುದು ಈ ಮಾತು ಸಾಕ್ಷೀಕರಿಸುತ್ತಿದೆ.