ಸಿಎಂ ಮುಸ್ಲಿಂ ಓಲೈಕೆ ಹೇಳಿಕೆ ಖಂಡಿಸಿ ಪ್ರತಿಭಟನೆ
Dec 09 2023, 01:15 AM ISTಮುಸ್ಲಿಂರಿಗೆ ಪ್ರತ್ಯೇಕ ಅನುದಾನ ನೀಡಲು ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಭಾರತದ ಯಾವುದೇ ರಾಜ್ಯ ಅಥವಾ ಯಾವುದೇ ಭಾಗದಲ್ಲಿ ವಾಸವಾಗಿರುವ ನಾಗರಿಕರ ಯಾವುದೇ ವಿಭಾಗವು ತನ್ನ ಲಿಪಿ ಹಾಗೂ ಸಂಸ್ಕೃತಿಯನ್ನು ಹೊಂದಿದ್ದರೆ ಅದನ್ನ ರಕ್ಷಿಸುವ ಹಕ್ಕು ಇರುತ್ತದೆ. ಆದರೆ ಮುಸ್ಲಿಂ ಸಮುದಾಯಕ್ಕೆ ವಿಶಿಷ್ಟ ಭಾಷೆಯಾಗಲಿ, ಲಿಪಿಯಾಗಲಿ, ಸಂಪ್ರದಾಯವಾಗಲಿ ಇಲ್ಲದೇ ಇರುವುದರಿಂದ ಆರ್ಟಿಕಲ್ 26ರ ಪ್ರಕಾರ ಇಲ್ಲದೇ ಇರುವುದರಿಂದ ಅವರಿಗೆ ಅನುದಾನ ನೀಡಲು ಬರುವುದಿಲ್ಲ. ಇದು ಸಂವಿಧಾನ ವಿರೋಧಿಯಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.