ಎಷ್ಟಾದ್ರೂ ಡಿಸಿಎಂ ಹುದ್ದೆ ಸೃಷ್ಟಿಸಿ, ಮೊದ್ಲು ಡಿಕೆಶಿ ಸಾಹೇಬ್ರು ಸಿಎಂ ಮಾಡಿ: ಚನ್ನಗಿರಿ ಶಾಸಕ ಹೇಳಿಕೆ
Jun 26 2024, 12:35 AM ISTನಮ್ಮ ಡಿ.ಕೆ.ಶಿವಕುಮಾರ ಸಾಹೇಬರನ್ನು ಮುಖ್ಯಮಂತ್ರಿ ಮಾಡಿ, 3 ಅಲ್ಲ, 8 ಅಲ್ಲ, 10 ಅಲ್ಲ 15 ಉಪ ಮುಖ್ಯಮಂತ್ರಿ ಹುದ್ದೆಗಳನ್ನಾದರೂ ಮಾಡಲಿ. ಜಾತಿಗೊಂದು ಉಪ ಮುಖ್ಯಮಂತ್ರಿ ಮಾಡಿದರೂ ಅದಕ್ಕೆ ನಮ್ಮ ವಿರೋಧವಿಲ್ಲ ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ದಾವಣಗೆರೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ ಪರ ಮತ್ತೊಮ್ಮೆ ಬಲವಾಗಿ ಬ್ಯಾಟ್ ಬೀಸಿದ್ದಾರೆ.