ಕೇಂದ್ರ ಸರ್ಕಾರ ನಬಾರ್ಡ್‌ನಿಂದ ನೀಡಲಾಗುತ್ತಿದ್ದ ಅನುದಾನವನ್ನು ಶೇ.58ರಷ್ಟು ಕಡಿತಗೊಳಿಸಿ ರೈತರಿಗೆ ದೊಡ್ಡ ಅನ್ಯಾಯ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ದೇಶದ ತಲಾ ಆದಾಯ (ಜಿಡಿಪಿ) ಹೆಚ್ಚಳದಲ್ಲಿ ಕರ್ನಾಟಕ, ನಂಬರ್ ಒನ್ ಸ್ಥಾನದಲ್ಲಿದೆ. ವಿದೇಶಿ ಬಂಡವಾಳ ಆಕರ್ಷಣೆ ಮತ್ತು ಕೇಂದ್ರಕ್ಕೆ ತೆರಿಗೆ ಪಾವತಿಸುವುದರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಾಲ್ಮೀಕಿ ಹಗರಣ, ದಲಿತರ ಹಣ ದುರ್ಬಳಕೆಯಿಂದ ಹಿಂದುಳಿದ ವರ್ಗದವರು, ದಲಿತರ ಶಕ್ತಿಯನ್ನು ಕಳೆದುಕೊಂಡಿರುವ ಸಿದ್ದರಾಮಯ್ಯ ಮುಸಲ್ಮಾನರ ಓಲೈಕೆಗೆ ನಿಂತಿದ್ದಾರೆ. ಮೈಸೂರಿನಲ್ಲಿ 101 ಕುರುಬರ ಮನೆಗಳಿಗೆ ವಕ್ಫ್ ಆಸ್ತಿ ಎಂದು ನೋಟೀಸ್ ಜಾರಿ ಮಾಡಿದ್ದರೂ ರಕ್ಷಣೆಗೆ ನಿಂತಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಾವುದೇ ಸಾರ್ವಜನಿಕ ಭಾಷಣದಲ್ಲಿ ಸಹಜವಾಗಿ ಅವರ ಬಾಲ್ಯ, ಮೇಷ್ಟ್ರು ಪಾಠ ಹೇಳಿಕೊಟ್ಟ ರೀತಿ, ತಾವು ಅಕ್ಷರ ಲೋಕಕ್ಕೆ ತೆರೆದುಕೊಂಡ ಸಂಗತಿಗಳ ಮೆಲುಕು ಇದ್ದೇ ಇರುತ್ತವೆ.