ಜೂ. 3ರಂದು ಲಕ್ಕುಂಡಿಗೆ ಸಿಎಂ ಸಿದ್ದರಾಮಯ್ಯ ಆಗಮನ
May 29 2025, 12:14 AM ISTಗದಗ ತಾಲೂಕಿನ ಲಕ್ಕುಂಡಿ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನ ಕಾಮಗಾರಿಗೆ ಜೂ. 3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಬಯಲು ವಸ್ತು ಸಂಗ್ರಾಲಯದ ಭೂಮಿಪೂಜೆ, ಕಾಶಿ ವಿಶ್ವನಾಥ, ನನ್ನೇಶ್ವರ ದೇಗುಲ ಹಾಗೂ ಜಂತ್ಲಿಶಿರೂರ ರಸ್ತೆಯಲ್ಲಿಯ ಐತಿಹಾಸಿಕ ಕಲ್ಮಠದ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ.