ಫಲಾನುಭವಿಗಳಿಗೆ ಹಣ ಬಿಡುಗಡೆಗೆ ಸಿಎಂಗೆ ಶಾಸಕ ಬಾಲಕೃಷ್ಣ ಮನವಿ
Nov 01 2025, 01:30 AM ISTವಿವಿಧ ಕಾಯಿಲೆಗಳು ಹಾಗೂ ಅಪಘಾತಗಳಿಗೆ ಒಳಗಾದ ಬಡವರು ಚಿಕಿತ್ಸೆಗಾಗಿ ಸಾಕಷ್ಟು ಖರ್ಚು ವೆಚ್ಚ ಮಾಡಿದ್ದಾರೆ. ಚಿಕಿತ್ಸೆ ಸಲುವಾಗಿ ಸಾಲ ಮಾಡಿಕೊಂಡಿದ್ದು ಜೀವನ ನಡೆಸಲಾಗದಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವರು ತುಂಬಾ ಕಡು ಬಡವರು ಇದ್ದು, ಚಿಕಿತ್ಸೆಗಾಗಿ ಹೆಚ್ಚಿನ ಖರ್ಚು ಮಾಡಿದ್ದಾರೆ. ತಲಾ ೧೭ ಲಕ್ಷ ರು. ಮೀರಿ ಖರ್ಚಾಗಿದ್ದು, ವಿಶೇಷ ಪ್ರಕರಣವೆಂದು ಪರಿಗಣಿಸಬೇಕು. ಅದರ ಸಲುವಾಗಿ ನಾನೇ ಖುದ್ದಾಗಿ ಬಂದಿದ್ದೇನೆ. ದಯವಿಟ್ಟು ಕ್ಷೇತ್ರದ ಫಲಾನುಭವಿಗಳ ಮೇಲೆ ದಯೆ ತೋರಿ ಎಂದು ಮನವಿ ಮಾಡಿದರು.