ರೈತರಿಗೆ ರಾಗಿ ಹಣ ನೀಡದೇ ವಿಳಂಬ
Oct 01 2025, 01:00 AM ISTಹಳ್ಳಿಮೈಸೂರಿನಲ್ಲಿ ಮಂಗಳವಾರ ಮಧ್ಯಾಹ್ನ ಕರವೇ ಹೋಬಳಿ ಯುವ ಘಟಕದ ಅಧ್ಯಕ್ಷರ ದಯಾನಂದ, ನೇತೃತ್ವದಲ್ಲಿ ತಾಲೂಕು ಹಳ್ಳಿ ಮೈಸೂರು ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಿರುವ ರೈತರ ಖಾತೆಗೆ ತಕ್ಷಣವೇ ಸರ್ಕಾರದಿಂದ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ತುರ್ತಾಗಿ ರೈತರ ಖಾತೆಗೆ ಹಣ ಜಮೆ ಮಾಡುವಂತೆ ಒತ್ತಾಯಿಸಿ, ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್‌ಗೆ ಮನವಿ ಪತ್ರ ನೀಡಿದರು. ಹೋಬಳಿ ವ್ಯಾಪ್ತಿಯ ರೈತರ ಜತೆಗೆ ಹಳ್ಳಿ ಮೈಸೂರು ಪೊಲೀಸ್ ಠಾಣೆಯಿಂದ ನಾಡಕಚೇರಿಯವರೆಗೆ ಪ್ರತಿಭಟನೆ ನಡೆಸಿ, ಹಳ್ಳಿ ಮೈಸೂರು ಹೋಬಳಿ ಉಪತಹಸೀಲ್ದಾರ್ ಶಿವಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.