ರೈತರಿಗೆ ಮಂಗಗಳ ಹಾವಳಿ ನಿಯಂತ್ರಣವೇ ದೊಡ್ಡ ಸವಾಲು. ಕೈಗೆ ಬಂದ ಬೆಳೆ ಮಂಗಗಳ ಪಾಲಾಗುತ್ತಿದೆ. ಏನೇ ಅನ್ನಿ ಎಷ್ಟು ಹಾವಳಿ ನಡೆಸಿದರೂ ಮಂಗಗಳನ್ನು ಕೊಲ್ಲುವಂತಿಲ್ಲ. ಹೀಗಿದ್ದಾಗ ಮಾಡೋದೇನು?
‘ಕಲಬುರಗಿಯಲ್ಲಿ ಪೊಲೀಸರನ್ನು ಕೇವಲ 15 ನಿಮಿಷ ತಡೆ ಹಿಡಿಯಿರಿ, ಮುಸ್ಲಿಮರನ್ನು ಸಾಮೂಹಿಕವಾಗಿ ಹತ್ಯೆ ಮಾಡುತ್ತೇವೆ’ ಎಂಬುದಾಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬೆದರಿಕೆ
ರಾಜ್ಯದಲ್ಲಿ ಭಾನುವಾರ ಕೊರೋನಾ ಸೋಂಕು ಪ್ರಕರಣ ಸ್ವಲ್ಪಮಟ್ಟಿಗೆ ಇಳಿಮುಖವಾಗಿದ್ದು, 17 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸಕ್ರಿಯ ಸೋಂಕು ಪ್ರಕರಣ 253ಕ್ಕೆ ಏರಿಕೆಯಾಗಿದೆ.
ರಾಜ್ಯ ಪೊಲೀಸ್ ವ್ಯವಸ್ಥೆಗೆ ಮೇಜರ್ ಸರ್ಜರಿ ನಡೆಸಲು ಸದ್ದಿಲ್ಲದೆ ಸಿದ್ಧತೆ ನಡೆದಿದೆ. ಹೊಸದಾಗಿ 20 ಉಪ ಮಹಾನಿರೀಕ್ಷಕ (ಡಿಐಜಿ) ಕೇಡರ್ ಹುದ್ದೆಗಳು ಹಾಗೂ ಒಂದು ಡಿಜಿಪಿ ಹುದ್ದೆ ಸೃಷ್ಟಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪೊಲೀಸ್ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.
ಪೊಲೀಸರೇ ಆರೋಪಿಯ ಮೊಬೈಲ್ ಬಳಸಿ ಆನ್ಲೈನ್ನಲ್ಲಿ ಬೆಟ್ಟಿಂಗ್ ಆಡಿ ಅಮಾನತಾಗಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಬೆಳಕಿಗೆ ಬಂದಿದೆ.
ಕೆನರಾ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ತಿಂಗಳ ಮೊತ್ತ ಕಾಯ್ದುಕೊಳ್ಳದಿದ್ದರೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ಘೋಷಿಸಿದೆ.
ಮಳೆಗಾಲದಲ್ಲಿ ಗುಡ್ಡ ಕುಸಿತ, ಬೇಸಿಗೆಯಲ್ಲಿ ನೀರಿನ ಅಭಾವ, ಜೀವವೈವಿಧ್ಯಕ್ಕೆ ಬಂದಿರುವ ಕುತ್ತು ಸೇರಿ ಇತರೆ ದುಷ್ಪರಿಣಾಮಗಳಿಂದ ಎಚ್ಚೆತ್ತ ಸರ್ಕಾರ ರಾಜ್ಯದ ಪಶ್ಚಿಮಘಟ್ಟ ಪ್ರದೇಶದ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಿ ವರದಿ ಪಡೆಯಲು ಮುಂದಾಗಿದೆ.
ಠಾಣೆಗಳಿಗೆ ಭೇಟಿ ಹಾಗೂ ಶೇ.80 ರಷ್ಟು ಠಾಣೆಗಳ ಪರಿವೀಕ್ಷಣೆ (inspection) ನಡೆಸಿ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಹೊಸ ದಾಖಲೆ ಬರೆದಿದ್ದಾರೆ.
ಯಾವುದೇ ದ್ರಾವಿಡ ಭಾಷೆಗಳು ಬೇರೊಂದರಿಂದ ಹುಟ್ಟಿಲ್ಲ. ಕೆಲವರು ನಾಲಿಗೆ ಹರಿಬಿಟ್ಟು ಸಮಸ್ಯೆ ಮಾಡುತ್ತಿರುವುದು ಮಾತ್ರವಲ್ಲದೆ ಕ್ಷಮೆ ಕೇಳಲು ಹಿಂದೇಟು ಹಾಕಿ ಪ್ರತಿಷ್ಠೆ ತೋರುತ್ತಿದ್ದಾರೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.
ಉದ್ಯಮಿಯೊಬ್ಬರು ಕುಟುಂಬ ಸಮೇತ ತಿರುಪತಿ ಪ್ರವಾಸಕ್ಕೆ ಹೋಗಿದ್ದ ವೇಳೆ ನೇಪಾಳ ಮೂಲದ ಕಾವಲುಗಾರ ದಂಪತಿ ನಗ-ನಾಣ್ಯ ದೋಚಿ ಪರಾರಿಯಾಗಿರುವ ಘಟನೆ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.