ಸ್ವಾತಂತ್ರ್ಯ ದಿನಾಚರಣೆಯ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆಯು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೀದರ್ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆ ಒದಗಿಸಲಿದೆ.
ವೇತನ ಹೆಚ್ಚಳ, ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ಆಗ್ರಹಿಸಿ ಸಾರಿಗೆ ನೌಕರರು ಆ.5ರಿಂದ ಮುಷ್ಕರಕ್ಕೆ ಮುಂದಾಗಿದ್ದಾರೆ. ಆದರೆ, ನೌಕರರ ಬೇಡಿಕೆ ಈಡೇರಿಸಲು ಹಿಂದಿನ ಸರ್ಕಾರದ ಆದೇಶ ಹಾಲಿ ರಾಜ್ಯ ಸರ್ಕಾರಕ್ಕೆ ತೊಡಕಾಗಿದೆ ಎನ್ನುತ್ತವೆ ಸಾರಿಗೆ ಇಲಾಖೆ ಮೂಲಗಳು.
ಬಿಬಿಎಂಪಿಯ ವ್ಯಾಪ್ತಿಯಲ್ಲಿ ಇನ್ನೂ 52 ಇಂದಿರಾ ಕ್ಯಾಂಟೀನ್ ನಿರ್ಮಾಣ ಸಂಬಂಧ ಬಿಬಿಎಂಪಿ ಸುಮಾರು 20 ಕೋಟಿ ರು. ವೆಚ್ಚದ ಯೋಜನೆ ಸಿದ್ಧಪಡಿಸಿದೆ.
‘ಕಾಂತಾರ ಅಧ್ಯಾಯ 1’ ಸಿನಿಮಾ ಬಿಡುಗಡೆಗೂ ಮೊದಲೇ ರಿಷಬ್ ಶೆಟ್ಟಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ
ಶಿವರಾಜ್ ಕುಮಾರ್ ನಟನೆಯ ‘ಸರ್ವೈವರ್’ ಚಿತ್ರಕ್ಕೆ ಚಾಲನೆ ಕೊಡಲಾಗಿದೆ. ಶಿವಣ್ಣ ಅವರು ಮೂತ್ರಕೋಶ ಕ್ಯಾನ್ಸರ್ನಿಂದ ಗೆದ್ದು ಬಂದ ಕತೆಯನ್ನು ಹೇಳಲಿರುವ ಈ ಚಿತ್ರ
ಭಾರತದಾದ್ಯಂತ ಸುದ್ದಿಯಾಗಿದ್ದ ಕೊಲೆ ಪ್ರಕರಣವೊಂದು ಇದೀಗ ಸಿನಿಮಾ ಆಗುತ್ತಿದೆ. ಹನಿಮೂನ್ ವೇಳೆ ಪತ್ನಿಯ ಸಂಚಿಗೆ ಬಲಿಯಾಗಿ ಜೀವ ಕಳೆದುಕೊಂಡ ರಾಜಾ ರಘುವಂಶಿಯ ಕತೆಯುಳ್ಳ ಈ ಸಿನಿಮಾದ ಹೆಸರು ‘ಹನಿಮೂನ್ ಇನ್ ಶಿಲ್ಲಾಂಗ್’.
ತಮಗೆ ಹಿಂದೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದನ್ನು ಪಕ್ಷದ ವರಿಷ್ಠರು ಮುಂದೆ ಸರಿಪಡಿಸಬಹುದು ಎನ್ನುವ ಸಂದೇಶ ನೀಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸಮಾಧಾನ ಹೊರಹಾಕಿದ್ದರೂ ಹಾಕಿರಬಹುದು - ಸತೀಶ್ ಜಾರಕಿಹೊಳಿ
ನ್ಯಾಯಾಂಗ ಕ್ಷೇತ್ರದ ಸುಧಾರಣೆಯ ದೃಷ್ಟಿಯಿಂದ ಕಾನೂನು ಪದವೀಧರರ ವಕೀಲಿಕೆ ನೋಂದಣಿ, ವಕೀಲರ ವಿರುದ್ಧ ಬರುವ ದೂರುಗಳ ವಿಚಾರಣೆ, ವಕೀಲರ ಕಲ್ಯಾಣ ಸೇರಿ ವಿವಿಧ ವಿಚಾರಗಳ ಕುರಿತು ಕರ್ನಾಟಕ ವಕೀಲರ ಪರಿಷತ್ ಇತ್ತೀಚೆಗೆ ತೆಗೆದುಕೊಳ್ಳುತ್ತಿರುವ ವಿವಿಧ ಉಪಕ್ರಮಗಳು ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದ ಅಧ್ಯಾಯ. ಒಬ್ಬರು ಸಿಎಂ ಇದ್ದಾಗ ಮತ್ತೊಬ್ಬರು ಆಗುವ ಸಾಧ್ಯತೆಯೇ ಇಲ್ಲ. ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ದೆಹಲಿಗೆ ಹೋದಾಗ ಸ್ಪಷ್ಟಪಡಿಸಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಬೆಂಗಳೂರಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮೆಟ್ರೋ ಇರುವ ಏಕೈಕ ಮಾರ್ಗವಾಗಿದೆ. ಹಾಗಾಗಿ ದೀರ್ಘಕಾಲದಿಂದ ಬಾಕಿ ಇರುವ ಹಳದಿ ಮಾರ್ಗವನ್ನು ಕೂಡಲೇ ಉದ್ಘಾಟಿಸಿ ಜನರಿಗೆ ಮುಕ್ತಗೊಳಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.