ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಪಂಚ ಪೀಠದ ಶ್ರೀಗಳ ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಪಂಚಮಸಾಲಿ ಸಮಾಜ ಒಪ್ಪಿಗೆ ಇಲ್ಲ. ಆ.10ರಂದು ಪಂಚಮಸಾಲಿ ಪೀಠದಲ್ಲಿ ಸಮಾಜದ ಸಭೆ ಸೇರಿ ಅದರ ನಿರ್ಣಯವನ್ನು ಸಮಾಜಕ್ಕೆ ತಿಳಿಸುತ್ತೇವೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದಶ್ರೀ ತಿಳಿಸಿದರು
ಎಐಸಿಸಿ ಅಧ್ಯಕ್ಷರಾಗಿರುವ ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಕಿರಿಯ ಮಗ ಮಿಲಿಂದ್ ಖರ್ಗೆ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ರಿಫೈನ್ಡ್ ಎಣ್ಣೆಯೇ ಆರೋಗ್ಯದ ಮೊದಲ ಶತ್ರು ಎಂದು ಅರಿತ ಆಯುರ್ವೇದ ವೈದ್ಯ ದಂಪತಿ ಗಾಣದ ಎಣ್ಣೆ ಬಳಸತೊಡಗಿದರು. ನಮ್ಮೂರಲ್ಲೇ ಶೇಂಗಾ ಇಷ್ಟೊಂದು ಬೆಳೆಯುವಾಗ ನಾವು ಬೆಂಗಳೂರಿಂದ ಎಣ್ಣೆ ತರ್ತೀವಲ್ಲ ಅಂತ ಶುರುವಾದ ಯೋಚನೆ ತಾವೇ ಮರದ ಎಣ್ಣೆ ಗಾಣ ಹಾಕುವ ನಿರ್ಧಾರವಾಗಿ ಬದಲಾಗಿದೆ.
ನನ್ನ ಬಗ್ಗೆ ಮಾತನಾಡುವವರಿಗೆ ಸಿಗಂದೂರು ಚೌಡೇಶ್ವರಿ ಮುಂದಿನ ದಿನಗಳಲ್ಲಿ ತಕ್ಕ ಬುದ್ಧಿ ಕಲಿಸಲಿದ್ದಾಳೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು
ಬಡ ಕುಟುಂಬದ ಹೆಣ್ಣುಮಕ್ಕಳು, ಮಹಿಳೆಯರಿಗಾಗಿ ಮಹಾರಾಷ್ಟ್ರದ ಫಡ್ನವೀಸ್ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ‘ಲಡ್ಕಿ ಬಹಿನ್’ ಯೋಜನೆಯ ಆಡಿಟ್ ವೇಳೆ ಭಾರೀ ಅಕ್ರಮಗಳು ಬೆಳಕಿಗೆ ಬಂದಿವೆ.
‘ಉಗ್ರರಿಗೆ ಮತ್ತು ಭಾರತದ ವೈರಿಗಳಿಗೆ ಸುರಕ್ಷಿತ ನೆಲೆಯೇ ಇಲ್ಲವೆಂಬುದು ಆಪರೇಷನ್ ಸಿಂದೂರದಿಂದ ಜಗಜ್ಜಾಹಿರವಾಗಿದೆ. ಸಾರ್ವಭೌಮತ್ವಕ್ಕೆ ಧಕ್ಕೆಯಾದಾಗ ಭಾರತ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬುದೂ ಈಗ ಎಲ್ಲರಿಗೂ ಗೊತ್ತಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತೀವ್ರ ಗದ್ದಲ, ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದ್ದ ಸಂಸತ್ತಿನ ಮಳೆಗಾಲದ ಅಧಿವೇಶನದ ಕಾರ್ಯಕಲಾಪ, ಸೋಮವಾರದಿಂದ ಮರಳಿ ಹಳಿಗೆ ಬರುವ ನಿರೀಕ್ಷೆ ಇದೆ.
ವಿಶ್ವಾದ್ಯಂತ ಉದ್ಯೋಗ ಕಡಿತ ಪರ್ವ ಶುರುವಾಗಿದ್ದು, ಜಾಗತಿಕ ದೈತ್ಯ ಕಂಪನಿಗಳು ಭಾರಿ ಸಂಖ್ಯೆಯಲ್ಲಿ ಹುದ್ದೆ ಕಡಿತಗೊಳಿಸುತ್ತಿವೆ.
ದೇಶದ 13 ರಾಜ್ಯಗಳ ಒಟ್ಟು 63 ಜಿಲ್ಲೆಗಳ ಅಂಗನವಾಡಿಯಲ್ಲಿ ಶೇ.50ರಷ್ಟು ಮಕ್ಕಳಲ್ಲಿ ಕುಂಠಿತ ಬೆಳವಣಿಗೆಯಿದೆ ಎಂದು ಕೇಂದ್ರ ಸರ್ಕಾರದ ವರದಿಯೊಂದು ಹೇಳಿದೆ
ಚಂದ್ರಯಾನ-3ರ ಯಶಸ್ಸು, ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ 14 ದಿನ ಇದ್ದು ಬಂದ ಬಳಿಕ ದೇಶದ ಮಕ್ಕಳಲ್ಲಿ ಬಾಹ್ಯಾಕಾಶ ಕ್ಷೇತ್ರದ ಕುರಿತು ಆಸಕ್ತಿ ಹೆಚ್ಚಾಗಿದೆ