ಮಂಡ್ಯ ನಗರದ ಕಲ್ಲಹಳ್ಳಿ ವಿ.ವಿ.ನಗರದ ನಿವಾಸಿಗಳಾದ ಅನಿತಾ ಹಾಗೂ ಹೇಮಚಂದ್ರು (ಮಂಜು) ಪುತ್ರಿ ವರ್ಷಾ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.80ರಷ್ಟು ಅಂಕ ಪಡೆದು ಉತ್ತೀರ್ಣರಾಗಿದ್ದರು. ಇದೀಗ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ
ಬರಗಾಲದ ಕಾರಣ ಹಾಕಿದ ಬೆಳೆ ಕೈಗೆ ಸಿಗದೆ ನಷ್ಟ ಉಂಟಾಗಿತ್ತು. ಸಾಲಗಾರರ ಕಿರುಕುಳ, ಬೆಳೆ ಇಲ್ಲದೆ ಕಂಗಾಲಾದ ಮಹೇಶ್ ಶನಿವಾರ ತಮ್ಮ ಜಮೀನಿನ ಬಳಿ ವಿಷ ಸೇವಿಸಿ ಮೃತಪಟ್ಟಿದ್ದಾನೆ.
ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ಆನೆದೊಡ್ಡಿ ಗ್ರಾಮದ ಸುಮಾರು 20 ಮಂದಿ ರೈತರು ತಮ್ಮ ಹಿಡುವಳಿ ಜಮೀನಿನಲ್ಲಿ ಬೆಳೆಯಲಾಗಿದ್ದ 150 ತೆಂಗಿನ ಮರಗಳು, ಮಾವಿನ ಮರಗಳು ಹಾಗೂ ಐದು ಎಕರೆ ಪ್ರದೇಶದಲ್ಲಿದ್ದ ನೀಲಗಿರಿ ಮರಗಳು ಬೆಂಕಿಯ ಕೆನಾಲಿಗೆ ಇಂದ ಸುಟ್ಟು ಹೋಗಿವೆ.
ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದ ರೈತರ ಕಬ್ಬಿನ ಗದ್ದೆಗಳು ಸುಟ್ಟು ನಾಶವಾಗಿವೆ. ಭಾನುವಾರ ಸಂಜೆ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಸುಮಾರು ಹತ್ತು ಎಕರೆ ಕಬ್ಬು ಬೆಳೆ ಸಂಪೂರ್ಣ ನಾಶವಾಗಿದೆ.