ಮರಕ್ಕೆ ಇನೋವಾ ಕಾರು ಡಿಕ್ಕಿ: ಇಬ್ಬರು ಸಾವು, ನಾಲ್ವರಿಗೆ ಗಂಭೀರ ಗಾಯಬೆಂಗಳೂರಿನಿಂದ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನ ಸಿದ್ದಪ್ಪಾಜಿ ದೇವಸ್ಥಾನಕ್ಕೆ ಸ್ನೇಹಿತರಾದ ಮಹದೇವ್, ಶ್ರೀನಿವಾಸ (ಚಾಲಕ), ಹೇಮಂತ್ ಯಾದವ್, ದರ್ಶನ್, ತೇಜಸ್, ಅಭಿಷೇಕ್, ಉಮೇಶ್ ತೆರಳಿ ವಾಪಾಸ್ ಬೆಂಗಳೂರಿಗೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.