ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ಗೆ ನೋಟಿಸ್ ಜಾರಿ..!ವರ್ತೂರು ಸಂತೋಷ್ ಹಳ್ಳಿಕಾರ್ ಗೋತಳಿಯ ಇತಿಹಾಸವನ್ನೇ ತಿರುಚುವಂತಹ ಪ್ರಯತ್ನ ಮಾಡುತ್ತಿದ್ದು, ಮುಂದಿನ ಪೀಳಿಗೆಯವರಿಗೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದಾರೆ. ಈ ಬಗ್ಗೆ ತಿಳುವಳಿಕೆ ಹೇಳಿರುವುದನ್ನು ಪರಿಗಣಿಸದೆ, ತನ್ನ ಉದ್ಧಟತನವನ್ನು ಮುಂದುವರಿಸುತ್ತಿರುವುದರಿಂದ ಕಾನೂನು ತಿಳುವಳಿಕೆ ಪತ್ರವನ್ನು (ಲೀಗಲ್ ನೋಟಿಸ್) ಆತನ ಮನೆ ವಿಳಾಸಕ್ಕೆ ಮಾ.೨ರಂದು ರವಾನಿಸಲಾಗಿದೆ.