ಎಷ್ಟೂಂತ ಹೆಂಡತಿಯನ್ನು ನೋಡುತ್ತೀರಿ. ಭಾನುವಾರವೂ ಕೆಲಸ ಮಾಡಿ. ವಾರಕ್ಕೆ 90 ತಾಸು ಕೆಲಸ ಮಾಡಿ ಎಂದಿದ್ದ ಎಲ್ ಆ್ಯಂಡ್ ಟಿ ಮುಖ್ಯಸ್ಥ ಸುಬ್ರಹ್ಮಣ್ಯನ್ ಅವರಿಗೆ ಉದ್ಯಮಿ ಆನಂದ ಮಹೀಂದ್ರಾ ತಿರುಗೇಟು ನೀಡಿದ್ದಾರೆ.
ಮದುವೆಯಾಗುವಂತೆ ಪದೇ ಪದೇ ಪೀಡಿಸುತ್ತಿದ್ದಕ್ಕೆ ವಿವಾಹಿತನೊಬ್ಬ ತನ್ನ ಲಿವ್ - ಇನ್ ಗೆಳತಿಯನ್ನು ಕೊಂದು ಸುಮಾರು 8 ತಿಂಗಳ ಕಾಲ ಶವವನ್ನು ಫ್ರಿಡ್ಜ್ನಲ್ಲಿಟ್ಟಿದ್ದ ಘಟನೆ ಮಧ್ಯಪ್ರದೇಶದ ದೇವಾಸ್ನಲ್ಲಿ ನಡೆದಿದೆ.
ಬಿಜೆಪಿ ಆಡಳಿತ ಇರುವ ಛತ್ತೀಸಗಢದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿ ತಲೆಗೆ 43 ಲಕ್ಷ ರು. ಇನಾಮು ಹೊಂದಿದ್ದ ಇಬ್ಬರು ಮಹಿಳೆಯರು ಸೇರಿದಂತೆ 9 ನಕ್ಸಲರು ಶನಿವಾರ ಪೊಲೀಸರಿಗೆ ಶರಣಾಗಿದ್ದಾರೆ
ಕೇರಳದಲ್ಲಿ 18 ವರ್ಷದ ದಲಿತ ಅಥ್ಲೀಟ್ ಮೇಲೆ ಆಕೆಯ ಕೋಚ್ಗಳು, ಸಹ ಆಟಗಾರರು ಸೇರಿದಂತೆ 64 ಪುರುಷರು 5 ವರ್ಷಗಳಿಂದ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಮಕ್ಕಳನ್ನು ಮೊಬೈಲ್ ಗೀಳಿನಿಂದ ತಪ್ಪಿಸಲು ಗುಜರಾತ್ ಸರ್ಕಾರ ನಿಯಮಾವಳಿಯನ್ನು ಜಾರಿ ತರಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ರಾಜ್ಯದ ಎಲ್ಲೆಡೆಯಿಂದ ಆಗಮಿಸಿ ನಗರದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಮಾಸಿಕ 10,000 ರು. ಗೌರವಧನ ನೀಡುವುದು ಸೇರಿ ಬಹುತೇಕ ಬೇಡಿಕೆ ಈಡೇರಿಸುವ ಭರವಸೆ ನೀಡಿದೆ.
ಯುವಕರು ಸ್ವಾರ್ಥ ಇರಿಸಿಕೊಂಡು ರಾಜಕೀಯಕ್ಕೆ ಬರಬಾರದು. ಮಿಷನ್ (ಗುರಿ) ಇರಿಸಿಕೊಂಡು ರಾಜಕೀಯಕ್ಕೆ ಬರಬೇಕು. ಅಗ ಅವರು ಯಶಸ್ವಿ ರಾಜಕಾರಣಿ ಎನ್ನಿಸಿಕೊಳ್ಳಲು ಸಾಧ್ಯ' ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.