ಸ್ಥಳೀಯ ಭಾಷೆಗಳೊಂದಿಗೆ ಹಿಂದಿ ಸ್ಪರ್ಧಿಸುವುದಿಲ್ಲ, ಬದಲಾಗಿ ಪೂರಕವಾಗಿ ಕೆಲಸ ಮಾಡುತ್ತದೆ : ಅಮಿತ್ ಶಾಸ್ಥಳೀಯ ಭಾಷೆಗಳು ಮತ್ತು ಹಿಂದಿ ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತವೆ ಹಾಗೂ ಹಿಂದಿ ಬೆಳವಣಿಗೆಗೆ ಸ್ಥಳೀಯ ಭಾಷೆಗಳ ಬೆಳವಣಿಗೆ ಅಗತ್ಯ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಹಿಂದಿ ದಿನಾಚರಣೆಯಂದು ಮಾತನಾಡಿದ ಅವರು, ಹಿಂದಿ ಮತ್ತು ಇತರ ಭಾಷೆಗಳ ನಡುವೆ ಯಾವುದೇ ಸ್ಪರ್ಧೆ ಇಲ್ಲ ಎಂದು ಸ್ಪಷ್ಟಪಡಿಸಿದರು.