• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • bagalkot

bagalkot

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸಂಘ ಪರಿವಾರದ ಪ್ರಮುಖ ಪ್ರಫುಲ್‌ದಾದಾ ದೇಶಪಾಂಡೆ ಇನ್ನಿಲ್ಲ
ಸಂತಾಪ: ಶಾಸಕ ಸಿದ್ದು ಸವದಿ, ಸುರೇಶ ರೇಣಕೆ, ಬಸವರಾಜ ಬಾಳಿಕಾಯಿ, ಸಿದ್ದು ಅಮ್ಮಣಗಿ, ಮಹಾವೀರ ಕೊಕಟನೂರ, ಮುರುಗೇಶ ಮಿರ್ಜಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.ತೇರದಾಳ(ರ-ಬ): ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಧುರೀಣ ಪ್ರಫುಲ್‌ದಾದಾ ದೇಶಪಾಂಡೆ (84) ತೇರದಾಳ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಬಂಧು-ಬಳಗ ಇದೆ.
ಮಾಜಿ ಸಚಿವ ಮುರುಗೇಶ ನಿರಾಣಿಗೆ ಮಾತೃ ವಿಯೋಗ
ಬಾಗಲಕೋಟೆ: ಮಾಜಿ ಸಚಿವ ಮುರುಗೇಶ ನಿರಾಣಿ ತಾಯಿ ಸುಶಿಲಾಬಾಯಿ ರುದ್ರಪ್ಪ ನಿರಾಣಿ (78) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಗೆ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಿಸದೇ ಸೋಮವಾರ ಕೊನೆಯುಸಿರೆಳೆದರು. ಜ.16ರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಸ್ವಗ್ರಾಮ ಬಸವಹಂಚಿನಾಳದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ನಿರಾಣಿ ಕುಟುಂಬಸ್ಥರು ತಿಳಿಸಿದ್ದಾರೆ.
ಮಕ್ಕಳ ಕಲಿಕೆಯಲ್ಲಿ ಪಾಲಕರ ಪಾತ್ರ ಪ್ರಮುಖ:ಮುಂಡೇವಾಡಿ
ಬಾದಾಮಿ: ತಾಲೂಕಿನ ಜಾಲಿಹಾಳ ಗ್ರಾಮದ ನೂತನ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ತಾಯಂದಿರ ಸಭೆಯಲ್ಲಿ ನಡೆಯಿತು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕ ಜಿ.ಎಚ್. ಮುಂಡೇವಾಡಿ ಮಾತನಾಡಿ, ಮಕ್ಕಳ ಕಲಿಕೆಯಲ್ಲಿ ಪಾಲಕರ ಪಾತ್ರ ಮಹತ್ತರವಾಗಿದ್ದು, ಶಾಲೆಯಿಂದ ಮಕ್ಕಳು ಸಂಜೆ ಮನೆಗೆ ಬಂದ ನಂತರ ಎಷ್ಟು ಕಲಿತಿದ್ದಾರೆ ಎಂದು ಪರಿಶೀಲನೆ ಮಾಡಬೇಕು ಎಂದರು.
ಬರಕ್ಕೆ ಸ್ಪಂದಿಸುವ ಬದಲು ಶ್ರೀ ರಾಮನ ಹೆಸರಿನಲ್ಲಿ ಕಾಲಹರಣ: ಸಚಿವ ಆರ್‌.ಬಿ.ತಿಮ್ಮಾಪುರ
ಮುಧೋಳ: ಬರಗಾಲದಿಂದ ತತ್ತರಿಸಿದ ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ಬಿಡಿಗಾಸು ನೀಡಿಲ್ಲ. ಜನರ ಸಂಕಷ್ಟಕ್ಕೆ ಸಹಾಯ ಮಾಡಬೇಕಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶ್ರೀ ರಾಮನ ಹೆಸರಿನಲ್ಲಿ ಜಪ-ತಪದಲ್ಲಿ ಕಾಲಹರಣ ಮಾಡುತ್ತಿದೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಕಿಡಿಕಾರಿದರು. ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಕಾಲಕ್ಕೆ ಮಳೆ ಆಗದೆ ಬರಗಾಲಕ್ಕೆ ತುತ್ತಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯ ಮಾಡಬೇಕಾದವರು ಶ್ರೀ ರಾಮನ ಜಪದಲ್ಲಿ ಮಗ್ನರಾಗಿದ್ದಾರೆ ಮತ್ತು ಯುವಕರ ಬುದ್ಧಿವಂತಿಕೆ ಶಕ್ತಿ ಮೇಲೆ ಉದ್ಯೋಗ ನೀಡಬೇಕಾದ ಸರ್ಕಾರ ಇಂದು ರಾಜಕೀಯವಾಗಿ ಶ್ರೀ ರಾಮನ ಜಪ ತಪದಲ್ಲಿದ್ದಾರೆ ಎಂದು ಟೀಕಿಸಿದರು.
ಪರೀಕ್ಷೆ ಯುದ್ಧ ಅಲ್ಲ ಹಬ್ಬದಂತೆ ಸಂಭ್ರಮಿಸಿ: ಕಲ್ಲಪ್ಪ ಚಿಂಚಲಿ
ಮಹಾಲಿಂಗಪುರ: ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿದರೆ ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬಹುದು ಎಂದು ಬಸವಾನಂದ ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ಕಲ್ಲಪ್ಪ ಚಿಂಚಲಿ ಹೇಳಿದರು.ಶ್ರೀ ಬಸವಾನಂದ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ತಾಯಂದಿರ ಸಭೆಯಲ್ಲಿ ಮಾತನಾಡಿದರು. ಫಲಿತಾಂಶ ಸುಧಾರಣೆಗೆ ಹಾಕಿಕೊಂಡ ಹಲವಾರು ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಜೀವನದ ಅತ್ಯುನ್ನತ ಘಟ್ಟವಾದ ಎಸ್ಸಸ್ಸೆಲ್ಸಿ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಪರಿಶ್ರಮದಿಂದ ಓದಿದರೆ ಹಬ್ಬದಂತೆ ಸಂಭ್ರಮ ಪಡಬಹುದು ಎಂದು ಹೇಳಿದರು.
ಬೆಳಗಲಿಯಲ್ಲಿ ಕಳೆಗಟ್ಟಿದ ಸಂಕ್ರಾಂತಿ ಸಂಭ್ರಮ
ಮಹಾಲಿಂಗಪುರ: ಇಂದಿನ ಅಂತರ್ಜಾಲ, ಮೊಬೈಲ್ ಯುಗದಲ್ಲಿ ಸ್ನೇಹ, ಪ್ರೀತಿಗಳು ಅಪರೂಪವಾಗಿವೆ. ಟಿವಿ ಪರದೆಯೇ ಎಲ್ಲರ ಬದುಕಿನ ಜೀವಾಳವಾಗಿದ್ದು, ನಮ್ಮ ಸಂಸ್ಕೃತಿಯ ಬಹುಮುಖ್ಯ ಭಾಗ ಅತಿಥಿಗಳ ಸತ್ಕಾರ ಕಣ್ಮರೆಯಾಗುತ್ತಿದೆ ರನ್ನ ಬೆಳಗಲಿಯ ದುಂಡಪ್ಪ ಭರ್ಮನಿ ಕಳವಳ ವ್ಯಕ್ತಪಡಿಸಿದರು. ಹಾಲಿಂಗಪುರದ ರನ್ನ ಬೆಳಗಲಿಯ ಶ್ರೀ ಮಹಾಲಿಂಗೇಶ್ವರ ಪಪೂ ಕಾಲೇಜಿನಲ್ಲಿ ನಡೆದ ನಮ್ಮ ಸಂಸ್ಕೃತಿ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಎಳ್ಳು ಬೆಲ್ಲ ಹಂಚುವ ಮೂಲಕ ಉದ್ಘಾಟಿಸಿ ಮಾತನಾಡಿ, ಇಂದಿನ ಜನರು ಸಮಯದ ಅಭಾವದ ನೆಪ ಹುಡುಕಿಕೊಂಡಿದ್ದಾರೆ. ಇದು ನಗರದ ಎಲ್ಲಾ ಮನೆ ಮನೆ ಕತೆಯಾದರೆ, ಹಳ್ಳಿಗಳು ಸಂಸ್ಕೃತಿಯ ತವರು. ಗ್ರಾಮೀಣ ಜನತೆ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುತ್ತಿದ್ದಾರೆ ಎಂದರು.
ಶಿವಯೋಗಿ ಸಿದ್ಧರಾಮೇಶ್ವರರು ಕಾಯಕಯೋಗಿ: ಸಂಸದ ಪಿ.ಸಿ. ಗದ್ದಿಗೌಡರ
ಬಾಗಲಕೋಟೆ: ಆಚಾರ ವಿಚಾರಗಳೊಂದಿಗೆ ಸಕಲ ಜೀವಿಗಳಿಗಳ ಒಳತಿಗಾಗಿ ಕೆರೆ, ಕಟ್ಟೆ, ಬಾವಿ ನಿರ್ಮಿಸಿ, ನೀರಿನ ಮಹತ್ವ ತಿಳಿಸಿಕೊಡಲು ಶ್ರಮಿಸಿದ ಶಿವಯೋಗಿ ಸಿದ್ಧರಾಮೇಶ್ವರರು ಕಾಯಕಯೋಗಿಯಾಗಿದ್ದರು ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು. ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ನವನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಕಾಯಕವಾಗಲಿ ಶ್ರದ್ಧೆಯಿಂದ ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ನೆಟ್ ಬಾಲ್ ಪಂದ್ಯಾವಳಿ: ಲಿಂಗರಾಜು ಕಾಲೇಜು ಚಾಂಪಿಯನ್‌
ಬಾದಾಮಿ: ನಗರದ ವೀರಪುಲಕೇಶಿ ಸಂಸ್ಥೆಯ ಎಸ್.ಬಿ.ಎಂ.ಪದವಿ ಕಾಲೇಜಿನ ಸಹಯೋಗದಲ್ಲಿ ವೀರಪುಲಿಕೇಶಿ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಆರ್‌ಸಿಯು ವಿಶ್ವವಿದ್ಯಾಲಯದ ತಂಡದ ಆಯ್ಕೆಗೆ ಎರಡು ದಿನಗಳ ಕಾಲ ಆಯೋಜಿಸಿದ್ದ ಏಕವಲಯ ಅಂತರ ಕಾಲೇಜುಗಳ ಪುರುಷರ ಹಾಗೂ ಮಹಿಳಾ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಎರಡೂ ವಿಭಾಗಗಳಲ್ಲಿ ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿತು.
ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ: ಅಶೋಕ ಹೆಗಡೆ
ಗುಳೇದಗುಡ್ಡ: ನಾನು ಬಡವ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದೇತ್ತೇನೆ ಎಂಬ ಕೀಳರಿಮೆ ಮಕ್ಕಳಲ್ಲಿ ಇರಬಾರದು. ಸರ್ಕಾರಿ ಶಾಲೆಯಲ್ಲಿಯೂ ಉತ್ತಮ ಕಲಿಕೆಗೆ ಪೂರಕವಾದ ವಾತಾವರಣ ಇದೆ. ಮಕ್ಕಳಲ್ಲಿ ನಿರಂತರ ಕಲಿಕೆ, ಪರಿಶ್ರಮ ಇದ್ದರೆ ಸರ್ಕಾರಿ ಶಾಲೆಯಲ್ಲಿಯೇ ಉನ್ನತ ಸಾಧನೆ ಮಾಡಬಹುದು ಎಂದು ಸಾಮಾಜಿಕ ಹೋರಾಟಗಾರ ಅಶೋಕ ಹೆಗಡೆ ಹೇಳಿದರು. ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.1ರಲ್ಲಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಮಕ್ಕಳಿಗೆ ನೋಟ್ ಬುಕ್, ಪೆನ್, ಬಟಿಂಗ್ಸ್, ಕಂಪಾಸ್ ಹಾಗೂ ಸಿಹಿ ವಿತರಿಸಿ ಮಾತನಾಡಿದರು.
ಧಾರ್ಮಿಕ ಕೇಂದ್ರ ಸ್ವಚ್ಛತೆಯ ಬಗ್ಗೆ ಜಾಗೃತಿ ಅವಶ್ಯ: ಶಾಸಕ ಸಿದ್ದು ಸವದಿ
ರಬಕವಿ-ಬನಹಟ್ಟಿ: ಧಾರ್ಮಿಕ ಕೇಂದ್ರಗಳನ್ನು ಸ್ವಚ್ಛ ಮಾಡುವ ಮೂಲಕ ಸಾರ್ವಜನಿಕವಾಗಿ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಪಟ್ಟಣಗಳು ಸ್ವಚ್ಛವಾಗಿರಲು ಜನರಲ್ಲಿ ಸ್ವಚ್ಛತೆಯ ಪರಿಕಲ್ಪನೆ ಮೂಡಿಸಬೇಕಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು. ರಬಕವಿಯ ಮಲ್ಲಿಕಾರ್ಜುನ, ಬನಶಂಕರಿ, ಮಹಾದೇವರ ದೇವಸ್ಥಾನ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆ ಪಾಲನೆಯೊಂದಿಗೆ ಪಾವಿತ್ರ‍್ಯ ರಕ್ಷಣೆ ಬಗ್ಗೆ ಭಕ್ತರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
  • < previous
  • 1
  • ...
  • 380
  • 381
  • 382
  • 383
  • 384
  • 385
  • 386
  • 387
  • 388
  • ...
  • 412
  • next >
Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved