• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • bagalkot

bagalkot

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಅಯ್ಯಪ್ಪಸ್ವಾಮಿ ಜಾತ್ರಾ ಮಹೋತ್ಸವ
ಮಹಾಲಿಂಗಪುರ: ಮಕರ ಸಂಕ್ರಮಣದ ಪ್ರಯುಕ್ತ ಪಟ್ಟಣದ ಅಯ್ಯಪ್ಪ ಬಡಾವಣೆ ದೇವಸ್ಥಾನದಲ್ಲಿ 17ನೇ ವರ್ಷದ ಅಯ್ಯಪ್ಪಸ್ವಾಮಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು.
ಇಂದಿನಿಂದ ಬನಶಂಕರಿದೇವಿ ಜಾತ್ರಾಮಹೋತ್ಸವ
ಇಳಕಲ್ಲ: ನಗರದ ಹಳೆ ಬನಶಂಕರಿದೇವಿ ದೇವಸ್ಥಾನದಲ್ಲಿ ಜ.17 ರಿಂದ 29ರವರಗೆ ಜಾತ್ರಾಮಹೋತ್ಸವ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಜ.17ರಂದು ಬೆಳಗ್ಗೆ ಘಟಸ್ಥಾಪನೆ, ಸಂಜೆ 6 ಗಂಟೆಗೆ ಸಿಂಹವಾಹನ ಧ್ವಜಾರೋಹಣ, ನಂತರ ಪಲ್ಲಕ್ಕಿ ಉತ್ಸವ(ಪ್ರತಿದಿನ ಸಂಜೆ 7 ಗಂಟೆಗೆ), ಜ.21 ಕಳಸ ಏರಿಸುವುದು, ಜ.24 ರಂದು ಸಂಜೆ 4 ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ದಶಮಿದಿಂಡಿನ ಶ್ರೀದೇವಿಯ ಮೆರವಣಿಗೆ, ಜ.25ರಂದು ಬೆಳಗ್ಗೆ ಹೋಮ, ಉಚ್ಚಯ್ಯ ರಥೋತ್ಸವ, ಸಂಜೆ 5ಗಂಟೆಗೆ ಮಹಾರಥೋತ್ಸವ ಜರುಗಲಿದೆ.
ಸಂಸದ ಅನಂತಕುಮಾರ್‌ ಹೆಗಡೆ ವಿರುದ್ಧ ದೂರು
ಗುಳೇದಗುಡ್ಡ: ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್‌ ಹೆಗಡೆ ಮುಖ್ಯಮಂತ್ರಿಗಳಿಗೆ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಮಂಗಳವಾರ ಇಲ್ಲಿನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದರು. ಕಾಂಗ್ರೆಸ್‌ ಕಾರ್ಯಕರ್ತರು ಅನಂತಕುಮಾರ್‌ ಹೆಗಡೆ ದೇಶದ್ರೋಹಿ ಮುಂತಾದ ಘೋಷಣೆಗಳನ್ನು ಕೂಗಿ, ಸಿದ್ದರಾಮಯ್ಯನವರಿಗೆ, ರಾಹುಲ್ ಗಾಂಧಿಗೆ ಜಯವಾಗಲಿ ಎಂದು ಜೈಕಾರ ಹಾಕಿದರು.
ರಾಷ್ಟ್ರೀಯ ಹಬ್ಬಗಳ ಘನತೆ ಎತ್ತಿ ಹಿಡಿಯೋಣ: ಶಾಸಕ ಸಿದ್ದು ಸವದಿ
ತೇರದಾಳ: ಪಟ್ಟಣದ ಪುರಸಭೆಯಲ್ಲಿ 74ನೇ ಗಣರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಪೂರ್ವಭಾವಿ ಸಭೆ ಮಂಗಳವಾರ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು, ರಾಷ್ಟ್ರೀಯ ಹಬ್ಬಗಳಲ್ಲಿ ವಿಷಯದಲ್ಲಿ ಯಾವುದೇ ಅಧಿಕಾರಿಗಳು ನಿರ್ಲಕ್ಷ್ಯ ಮಾಡಕೂಡದು. ಎಲ್ಲರೂ ಅತ್ಯಂತ ಸಡಗರ, ಸಂಭ್ರಮ, ಗೌರವಾದಗಳಿಂದ ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂದು ಹೇಳಿದರು.
26ರಿಂದ ಜಿಲ್ಲಾದ್ಯಂತ ಸಂವಿಧಾನ ಜಾಗೃತಿ ಜಾಥಾ: ಜಿಲ್ಲಾಧಿಕಾರಿ ಜಾನಕಿ ಕೆ.ಎಂ
ಬಾಗಲಕೋಟೆ: ಸಂವಿಧಾನ ಜಾರಿಗೆ ಬಂದು 75ನೇ ವರ್ಷಾಚರಣೆ ಅಂಗವಾಗಿ ಜ.26ರಿಂದ ಜಿಲ್ಲಾದ್ಯಂತ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಕುರಿತು ಮಂಗಳವಾರ ಜರುಗಿದ ವಿಡಿಯೋ ಸಂವಾದ ನಡೆಸಿದ ಬಳಿಕ ಮಾತನಾಡಿದ ಅವರು, ಸಂವಿಧಾನದ ಮಹತ್ವ ಹಾಗೂ ರಾಷ್ಟ್ರೀಯ ಏಕತೆ ಎತ್ತಿ ಹಿಡಿಯುವ ಉದ್ದೇಶದಿಂದ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ನಾರಾಯಣ ಗುರುಗಳನ್ನೊಳಗೊಂಡ ಸ್ತಬ್ಧ ಚಿತ್ರಗಳೊಂದಿಗೆ ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಜಾಗೃತಿ ಜಾಥಾ ಸಂಚರಿಸಲಿದೆ ಎಂದು ಹೇಳಿದರು.
ಸಾಧನೆಗೆ ಸತತ ಅಧ್ಯಯನ, ರಚನಾತ್ಮಕ ಬರವಣಿಗೆ ಅಗತ್ಯ: ಪ್ರಾಚಾರ್ಯ ಡಾ.ಎಸ್.ಬಿ. ಮಟೋಳಿ
ಮುಧೋಳ: ಸ್ಥಳೀಯ ಆರ್.ಎಂ.ಜಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 2023-24ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರೋಪ ಸಮಾರಂಭ ನಡೆಯಿತು. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಕಬಡ್ಡಿ ಸ್ಪರ್ಧೆಗೆ ಆಯ್ಕೆಯಾಗಿದ್ದ ಆರ್.ಎಂ.ಜಿ. ಪ್ರೌಢಶಾಲೆಯ ವಿದ್ಯಾರ್ಥಿಗಳು ತೆಲಂಗಾಣದಲ್ಲಿ ನಡೆದ ಸ್ಪರ್ಧೆಯಲ್ಲಿ ರನ್ನರ್ ಆಫ್ ಪ್ರಶಸ್ತಿ ಪಡೆದ ಎಲ್ಲ ಕಬಡ್ಡಿ ಆಟಗಾರರನ್ನು, ಇತರೆ ಕ್ರೀಡಾಪಟುಗಳನ್ನು ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಕಾಲೇಜಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದುಬಹುಮಾನ, ಪ್ರಮಾಣಪತ್ರ ನೀಡಿ ಸತ್ಕರಿಸಲಾಯಿತು.
22ರಂದು ಪಂಚಮುಖಿ ಆಂಜನೇಯ ದೇವಸ್ಥಾನದ ಲೋಕಾರ್ಪಣೆ
ಬಾಗಲಕೋಟೆ: ನಗರದ ಮುಚಖಂಡಿ ಕ್ರಾಸ್ ನ ಪಂಚಮುಖಿ ಆಂಜನೇಯ ದೇವಸ್ಥಾನದ ಲೋಕಾರ್ಪಣೆ ಹಾಗೂ ಭವ್ಯ ಶೋಭಾಯಾತ್ರೆ, ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಜ.18 ರಿಂದ 22ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜ18ರಂದು ಬೆಳಗ್ಗೆ 10 ಗಂಟೆಗೆ ಕೊತ್ತಲೇಶ್ವರ ದೇವಸ್ಥಾನದಿಂದ ಶೋಭಾಯಾತ್ರೆ ಹೊರಡಲಿದ್ದು, ಕಲಾತಂಡಗಳು, ಜನಪದ ನೃತ್ಯಗಳು ಭಾಗವಹಿಸಲಿವೆ. ಜ.22ರಂದು ಬೆಳಗ್ಗೆ 11 ಗಂಟೆಗೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಲೋಕಾರ್ಪಣೆ ನೆರವೇರಲಿದೆ ಎಂದು ಮಾರುತೇಶ್ವರ ದೇವಸ್ಥಾನದ ಸ್ವಾಗತ ಸಮಿತಿ ಅಧ್ಯಕ್ಷ ರವಿ ಕುಮಟಗಿ ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಜನರ ಆತಿಥ್ಯ ಮರೆಯಲಾರೆ: ಖ್ಯಾತ ಚಿತ್ರ ನಟ ಶೋಭರಾಜ್
ಇಳಕಲ್ಲ: ಇಳಕಲ್ಲ ತಾಲೂಕಿನ ಸುಕ್ಷೇತ್ರ ಸಿದ್ಧನಕೊಳ್ಳದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಿದ್ಧಶ್ರೀ ಚಲನ ಚಿತ್ರೋತ್ಸವದಲ್ಲಿ ಖ್ಯಾತ ಚಿತ್ರ ನಟ ಶೋಭರಾಜ್ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದರ. ಈ ವೇಳೆ ಇಳಕಲ್ಲ ನಗರಕ್ಕೆ ಭೇಟಿ ನೀಡಿದ್ದಾಗ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಉಪಹಾರ ಕೂಟದಲ್ಲಿ ಪಾಲ್ಗೊಂಡು ಆತಿಥ್ಯ ಸ್ವೀಕರಿಸಿ ಮಾತನಾಡಿ, ಉತ್ತರ ಕರ್ನಾಟಕದ ಭಾಗದ ಜನರು ಮುಗ್ಧರು, ಅವರ ಆತಿಥ್ಯೋಪಚಾರ ಯಾವತ್ತೂ ಮರೆಯುವುದಿಲ್ಲ ಹಳೆಯ ನೆನಪು ಮೆನಕು ಹಾಕಿದರು.
ಜಿಲ್ಲಾ ಬಿಜೆಪಿಗೆ ಮತ್ತೆ ಶಾಂತಗೌಡರ ಸಾರಥ್ಯ
ಬಾಗಲಕೋಟೆ: ಜಿಲ್ಲಾ ಬಿಜೆಪಿಗೆ ನೂತನ ಜಿಲ್ಲಾಧ್ಯಕ್ಷರ ಘೋಷಣೆಯಾಗಿದ್ದು, ಶಾಂತಗೌಡ ಪಾಟೀಲರನ್ನೇ ಭಾಜಪ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಮುಂದುವರಿಸಲಾಗಿದೆ.ಬಿಜೆಪಿ ಜಿಲ್ಲಾಧ್ಯಕ್ಷ, ಬಾಗಲಕೋಟೆ, ಶಾಂತಗೌಡ ಪಾಟೀಲ, ಜಿಲ್ಲಾ ಘಟಕ
ವರಕವಿ ಈಶ್ವರ ಸಣಕಲ್ಲ ಪ್ರತಿಷ್ಠಾನ ಸ್ಥಾಪನೆಯಾಗಲಿ: ಶಿವಾನಂದ ಶೆಲ್ಲಿಕೇರಿ
ರಬಕವಿ-ಬನಹಟ್ಟಿ: ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ ಎಂದು ಹೇಳಿದ ನಾಡಿನ ಖ್ಯಾತ ಕವಿ ಈಶ್ವರ ಸಣಕಲ್ಲ ಅವರ ಅಪ್ರಕಟಿತ ಕವನಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ ಕೊಟ್ಟರೆ ಅಕಾಡೆಮಿ, ವಿಶ್ವವಿದ್ಯಾನಿಲಯ ಸಹಕಾರದೊಂದಿಗೆ, ಕಸಾಪ ಪುಸ್ತಕಗಳನ್ನು ಪ್ರಕಟಿಸಲು ಪ್ರಯತ್ನಿಸಲಿದೆ. ರಾಜ್ಯ ಸರ್ಕಾರ ಈಶ್ವರ ಸಣಕಲ್ಲ ಅವರ ಹೆಸರಿನಲ್ಲಿ ಸಾಹಿತ್ಯ ಪ್ರತಿಷ್ಠಾನ ಆರಂಭಿಸಬೇಕೆಂದು ಕಸಾಪ ಜಿಲ್ಲಾ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಆಗ್ರಹಿಸಿದರು. ರಾಮಪುರ ಶ್ರೀನೀಲಕಂಠೇಶ್ವರ ಮಠದ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ, ತಾಲೂಕು ಘಟಕ ರಬಕವಿ-ಬನಹಟ್ಟಿ, ಕಸಾಪ ತೇರದಾಳ-ಮಹಾಲಿಂಗಪುರ ವಲಯಗಳು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪುಸ್ತಕಾವಲೋಕನ-25, ಬೆಳ್ಳಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
  • < previous
  • 1
  • ...
  • 379
  • 380
  • 381
  • 382
  • 383
  • 384
  • 385
  • 386
  • 387
  • ...
  • 412
  • next >
Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved