ಶರಣರಿಗೆ ಕೂಡಲಸಂಗಮ ತೀರ್ಥಕ್ಷೇತ್ರ: ಹಂಸಲೇಖಬಾಗಲಕೋಟೆ: ನನ್ನ ಜೀವನದಲ್ಲಿ ಎಷ್ಟೋ ಪ್ರಮುಖ ಘಟನೆಗಳು ನಡೆದಿವೆ. ಕ್ರೈಸ್ತರಿಗೆ, ಮುಸ್ಲಿಮರಿಗೆ ಬೇರೆ ಬೇರೆ ತೀರ್ಥ ಕ್ಷೇತ್ರಗಳಿದ್ದರೆ, ಶರಣರಿಗೆ ಕೂಡಲಸಂಗಮ ತೀರ್ಥ ಕ್ಷೇತ್ರವಾಗಿದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು. ಕೂಡಲಸಂಗಮದಲ್ಲಿ ನಡೆದ 37ನೇ ಶರಣಮೇಳದಲ್ಲಿ ರಾಷ್ಟ್ರಮಟ್ಟದ ಸ್ವಾಮಿ ಲಿಂಗಾನಂದ ಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು,  ಈ ಸಮಾಜದ ದಿಟ್ಟ ಮಹಿಳೆ, ಮೇಧಾ ಪಾಟ್ಕರ್ ಅವರು ಬಂದಿದ್ದಾರೆ. ಹೀಗಾಗಿ ಈ ಪ್ರಶಸ್ತಿಗೆ ರಾಷ್ಟ್ರಮಟ್ಟದ ಇಂಬು ಬಂದಿದೆ ಎಂದು ಬಣ್ಣಿಸಿದರು.