ಅಕ್ರಮ ಮರ್ರಂ ಸಾಗಾಟ ಮರು ಸರ್ವೆ ಆಗಲಿ: ಬಂಗಾರು ಹನುಮಂತುಸಂಡೂರು ತಾಲೂಕಿನ ಯರ್ರ,ಯ್ಯನಹಳ್ಳಿ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಗಡಾದ್ ರಮೇಶ ಅವರು ಅಕ್ರಮವಾಗಿ ಗಣಿಗಾರಿಕೆ ಮಾಡಿ ಮರ್ರಂr (ಗ್ರಾವೆಲ್) ಸಾಗಿಸಿರುವುದು ದೃಢಪಟ್ಟಿದೆ. ಆರೋಪಿಗಳಾದ ಗಡಾದ್ ರಮೇಶ ಹಾಗೂ ಬೊಮ್ಮಘಟ್ಟ ಭೀಮಪ್ಪ ಅವರ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಬಿ.ಆರ್. ಮಮತಾ ಅವರು ಸಂಡೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿದ್ದಾರೆ ಎಂದು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಹೇಳಿದರು.