• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • ballari

ballari

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
22ರಂದು ಅತಿಥಿ ಉಪನ್ಯಾಸಕರ ರಾಜ್ಯಮಟ್ಟದ ಸಮಾವೇಶ
ಅತಿಥಿ ಉಪನ್ಯಾಸಕರು ಹತ್ತು ವರ್ಷಕ್ಕಿಂತಲೂ ಹೆಚ್ಚು ಸೇವೆ ಸಲ್ಲಿಸುತ್ತಿದ್ದಾರೆ. ಇಷ್ಟಾಗಿಯೂ ಅತಿಥಿ ಉಪನ್ಯಾಸಕರಿಗೆ ಮಾಸಿಕ ಗೌರವಧನ ₹12 ಸಾವಿರಗಳಿಗೆ ಮೀರಿಲ್ಲ. ಇದು ಕೂಡ ಪ್ರತಿತಿಂಗಳು ನೀಡುವುದಿಲ್ಲ. ಮೂರು ತಿಂಗಳಿಗೊಮ್ಮೆಯೋ, ಐದು ತಿಂಗಳಿಗೊಮ್ಮೆ ಕೈ ತಲುಪುತ್ತದೆ. ಕೆಲವು ಜಿಲ್ಲೆಗಳಲ್ಲಿ ರಜಾ ದಿನ ಪರಿಗಣಿಸಿ ವೇತನ ಕಡಿತಗೊಳಿಸಲಾಗುತ್ತಿದೆ. ಇನ್ನು ರಾಜ್ಯದ ಹಲವಾರು ಕಾಲೇಜುಗಳಲ್ಲಿ ವಾರಕ್ಕೆ ಕೇವಲ 10 ಗಂಟೆ ಮಾತ್ರ ಕಾರ್ಯಭಾರ ನೀಡಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಸುತ್ತೋಲೆ ಇದ್ದರೂ ವಾರಕ್ಕೆ 20 ಗಂಟೆಗಳಿಗಿಂತ ಹೆಚ್ಚು ಕಾರ್ಯಭಾರ ನೀಡಲಾಗುತ್ತಿದೆ
ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯ
ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಂ ಅವರ ಮೇಲೆ ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಗುರುವಾರ ಕಲಬುರಗಿಯಲ್ಲಿ ವಕೀಲ ಈರಣ್ಣ ಮಾಲಿಪಾಟೀಲ್ ಅವರ ಮೇಲೆ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ವಕೀಲರ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಭಯದ ವಾತಾವರಣ ಸೃಷ್ಟಿಯಾಗಿದೆ. ಆದ್ದರಿಂದ ‘ವಕೀಲರ ಹಿತ ರಕ್ಷಣಾ ಕಾಯ್ದೆ’ಯನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಅಂಕ ಹೆಚ್ಚು ಗಳಿಕೆಗೆ ಉತ್ತಮ ಅಭ್ಯಾಸ ಅತ್ಯಗತ್ಯ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಸತತ ಓದು ಅಧ್ಯಯನ ಅತ್ಯಗತ್ಯ ಎಂದು ಪ್ರಾಚಾರ್ಯ ಎ. ಕೊಟ್ರಗೌಡ ಹೇಳಿದರು.ಪಟ್ಟಣದ ಸೊಪ್ಪಿನ ಕಾಳಮ್ಮನವರ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪಾಲಕ, ಪೋಷಕರ ಸಭೆಯಲ್ಲಿ ಮಾತನಾಡಿದರು.
ಸಾಮೂಹಿಕ ವಿವಾಹದಿಂದ ಜಾತಿ ಜಾಡ್ಯ ತೊಲಗಿಸಬಹುದು
ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿಸಾಮೂಹಿಕ ವಿವಾಹಗಳು ಆರ್ಥಿಕ ಹೊರೆ ತಗ್ಗಿಸುತ್ತವೆ ಎಂದು ಜಿಪಂ ಮಾಜಿ ಸದಸ್ಯ ರೋಗಾಣಿ ಹುಲುಗಪ್ಪ ಹೇಳಿದರು.ತಾಲೂಕಿನ ನಾರಾಯಣ ದೇವರ ಕೆರೆ ಗ್ರಾಮದಲ್ಲಿ ೧೧ನೇ ವರ್ಷದ ಪಾಂಡುರಂಗ ರುಕ್ಮಿಣಿ ದಿಂಡಿ ಮಹೋತ್ಸವ ನಿಮಿತ್ತ ನಡೆದ ೧೦ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂತಹ ವಿವಾಹಗಳಿಂದ ಜಾತಿ ಜಾಡ್ಯ ತೊಲಗಿಸಬಹುದು. ಸಾಮೂಹಿಕ ವಿವಾಹಗಳು ಬಡವರ ಬದುಕಿಗೆ ವರದಾನವಿದ್ದಂತೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾಮೂಹಿಕ ವಿವಾಹ ಮಾಡುವುದರಿಂದ ವಧುವರರಿಗೆ ಒಳ್ಳೆಯದಾಗುತ್ತದೆ ಎಂದರು.
ಡಿ. 22ಕ್ಕೆ ಅತಿಥಿ ಉಪನ್ಯಾಸಕರ ರಾಜ್ಯಮಟ್ಟದ ಸಮಾವೇಶ
ಕನ್ನಡಪ್ರಭ ವಾರ್ತೆ ಬಳ್ಳಾರಿಬೆಂಗಳೂರಿನ ಗಾಂಧಿ ಭವನದಲ್ಲಿ ಡಿ. 22ರಂದು ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಎಸ್.ಜಿ. ನಾಗರತ್ನ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಮಾಸಿಕ ಗೌರವಧನವನ್ನು ಕನಿಷ್ಠ ₹ 25 ಸಾವಿರಗಳಿಗೆ ಹೆಚ್ಚಿಸಬೇಕು.
ರಾತ್ರೋರಾತ್ರಿ ಬೆಳೆನಾಶ: ರೈತರಿಂದ ದೂರು ದಾಖಲು
ಸರ್ವೆ ನಂ. ೬೦ರಲ್ಲಿನ ನಾಲ್ಕು ಎಕರೆ ಹಾಗೂ ಹೆಚ್ಚುವರಿ ೩ ಎಕರೆ ಭೂಮಿಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಯನ್ನು ವೀಲ್ ಲೋಡರ್ ಬ‍ಳಸಿ ನಾಶಪಡಿಸಲಾಗಿದೆ. ಹೊಲದಲ್ಲಿದ್ದ ಪೇರಲ ಗಿಡ, ತೆಂಗಿನ ಮರ, ಸೀತಾಫಲ ಗಿಡಗಳನ್ನು ಹಾಗೂ ಹೊಲದಲ್ಲಿದ್ದ ಪೈಪ್‌ಲೈನ್ ಹಾಗೂ ಸ್ಪ್ರಿಂಕ್ಲರ್ ಪೈಪ್‌ಗಳನ್ನು ನಾಶ ಮಾಡಲಾಗಿದೆ. ಇದರಿಂದ ಲಕ್ಷಾಂತರ ರು. ಮೌಲ್ಯದ ಬೆಳೆ, ಕೃಷಿ ಉಪಕರಣಗಳು ನಾಶವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಕೀಲರ ರಕ್ಷಣೆಗಾಗಿ ಕಾಯ್ದೆ ಜಾರಿಗೆ ಆಗ್ರಹ
ನ್ಯಾಯಾಂಗ ವ್ಯವಸ್ಥೆಯಲ್ಲಿ ಕಕ್ಷಿದಾರರ ಹಿತ ಕಾಯಲು ಹಾಗೂ ನ್ಯಾಯದ ಪರವಾಗಿ ಕೆಲಸ ಮಾಡಲು ವಕೀಲರು ತೊಡಗಿಸಿಕೊಂಡಿದ್ದಾರೆ. ಆದರೆ, ವಕೀಲರ ಮೇಲೆ ಅಮಾನವೀಯವಾದ ಹಲ್ಲೆ ಹಾಗೂ ಕೊಲೆ ಪ್ರಕರಣಗಳು ನಡೆಯುತ್ತಿರುವುದು ಇಡೀ ವಕೀಲರ ವಲಯದಲ್ಲಿ ಭೀತಿಯನ್ನುಂಟು ಮಾಡಿದೆ. ಅಷ್ಟೇ ಅಲ್ಲ; ವಕೀಲರ ಕುಟುಂಬಗಳು ಸಹ ಆತಂಕಗೊಂಡಿವೆ. ಅದರಲ್ಲೂ ಕಲಬುರಗಿಯಲ್ಲಿ ವಕೀಲ ಈರಣ್ಣನವರ ಕೊಲೆ ಪ್ರಕರಣ ತೀವ್ರ ಆಘಾತ ನೀಡಿದೆ. ವಕೀಲರ ವಿರುದ್ಧ ದೌರ್ಜನ್ಯ ಪ್ರಕರಣಗಳು ನಿಯಂತ್ರಣಕ್ಕೆ ಬರಲು ಕಠಿಣ ಕಾನೂನು ಜಾರಿಯಾಗಬೇಕಾದ ಅಗತ್ಯವಿದೆ.
ಸಂಗೀತ, ಚಿತ್ರಕಲಾ, ದೈಹಿಕ ಶಿಕ್ಷಣ ಶಿಕ್ಷಕರ ನೇಮಿಸಿ
ಅಪಾರ ಸಂಖ್ಯೆಯ ಅಭ್ಯರ್ಥಿಗಳು ಪ್ರತಿವರ್ಷ ಈ ವಿಷಯಗಳಲ್ಲಿ ಪದವಿ ಗಳಿಸಿ ಉದ್ಯೋಗಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಈ ವಿಷಯಗಳಿಗೆ 2008- 09ನೇ ಸಾಲಿನಲ್ಲಿ ಸುಮಾರು 600 ಶಿಕ್ಷಕರನ್ನು ನೇಮಕಾತಿ ಮಾಡಿದ್ದು ಬಿಟ್ಟರೆ ಇದುವರೆಗೆ ಈ ಶಿಕ್ಷಕರ ನೇಮಕಾತಿಗಳೇ ಆಗಿಲ್ಲ. ವಸತಿ ಶಾಲೆಗಳಿಗೆ 2022- 23ರಲ್ಲಿ ಕ್ರೈಸ್ ಅಡಿಯಲ್ಲಿ ಸುಮಾರು 1200 ಶಿಕ್ಷಕರ ನೇಮಕವಾಗಿದೆ. ಆದರೆ ಇನ್ನೂ ಬಹುತೇಕ ಶಾಲೆಗಳಿಗೆ ಈ ಶಿಕ್ಷಕರ ನೇಮಕಾತಿ ಆಗಬೇಕಿದೆ.
3 ಬಾರಿ ಚಿಕ್ಕಜೋಗಿಹಳ್ಳಿಗೆ ಭೇಟಿ ನೀಡಿದ್ದ ಲೀಲಾವತಿ
ಬೆಂಗಳೂರಿನಿಂದ ಮೊದಲ ಬಾರಿಗೆ ಚಿಕ್ಕಜೋಗಿಹಳ್ಳಿಗೆ 1960ರಲ್ಲಿ ಡಾ. ರಾಜಕುಮಾರ್, ಬಾಲಕೃಷ್ಣ ಹಾಗೂ ಇತರ ನಟರೊಂದಿಗೆ ಅಗಮಿಸಿದ್ದರು. ನಂತರ 1964ರಲ್ಲಿ ತೆರೆಕಂಡ ತುಂಬಿದಕೊಡ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಭೇಟಿ ನೀಡಿದ್ದರು. ಲೀಲಾವತಿ ಅವರ ಮಗ ನಟ ವಿನೋದರಾಜ್ ಅವರು ನಟಿಸಿದ ಕಾಲೇಜು ಹೀರೊ ಬಿಡುಗಡೆ ವೇಳೆ 1990ರಲ್ಲಿ ಚಿಕ್ಕಜೋಗಿಹಳ್ಳಿಗೆ ಆಗಮಿಸಿದ್ದರು.
ಸ್ವದೇಶ ದರ್ಶನ-೨.೦: ಹಂಪಿಯಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ಕ್ರಮ
ಪ್ರವಾಸೋದ್ಯಮ ಸಚಿವಾಲಯವು ಸ್ವದೇಶ್‌ ದರ್ಶನ್ ೨.೦ ಯೋಜನೆಯಡಿ ಸಮಗ್ರ ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಲು ಕರ್ನಾಟಕದ ಹಂಪಿಯನ್ನು ಆಯ್ಕೆ ಮಾಡಿದ್ದು, ಇದು ಜನವರಿ ೨೦೨೩ರಲ್ಲಿ ಪ್ರಾರಂಭಿಸಿ ಹಂಪಿ ಪ್ರವಾಸೋದ್ಯಮ ಅಭಿವೃದ್ಧಿಗೆ ₹೭೦ ಕೋಟಿ ನಿಧಿಯನ್ನು ಕಾಯ್ದಿರಿಸಿದೆ. ಸ್ವದೇಶ್‌ ದರ್ಶನ ೨.೦ ಭಾಗವಾಗಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಂಪಿ ಸ್ಥಳ ಅಭಿವೃದ್ಧಿ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ
  • < previous
  • 1
  • ...
  • 229
  • 230
  • 231
  • 232
  • 233
  • 234
  • 235
  • 236
  • 237
  • ...
  • 254
  • next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved