ಬಸವಣ್ಣನವರು ಪರಿವರ್ತನೆಯ ಹರಿಕಾರರು: ಡಾ. ನಿಷ್ಠಿ ರುದ್ರಪ್ಪ. 12ನೇ ಶತಮಾನದಲ್ಲಿ ಬಸವಣ್ಣ ಹುಟ್ಟಿ ಬರದಿದ್ದರೆ ವೈದಿಕತೆ, ಮೌಢ್ಯತೆ, ಅಂಧಕಾರ, ಬಡತನ ಇನ್ನೂ ಹೆಚ್ಚಾಗುತ್ತಿತ್ತು. ಬಸವಣ್ಣ ಪರಿವರ್ತನೆಯ ಹರಿಕಾರರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಅಭಿಪ್ರಾಯಪಟ್ಟರು.