ವ್ಯಾಯಾಮ, ಪೌಷ್ಟಿಕ ಆಹಾರದಿಂದ ಮೂಳೆ ಗಟ್ಟಿಕನ್ನಡಪ್ರಭ ವಾರ್ತೆ ಬೆಳಗಾವಿ ಕ್ಯಾಲ್ಸಿಯಂಯುಕ್ತ ಉತ್ತಮ ಪೌಷ್ಟಿಕ ಆಹಾರ ಕೊರತೆಯಿಂದ ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಜನತೆ ಆಹಾರ, ವಿಹಾರದ ಕಡೆಗೆ ಹೆಚ್ಚಿನ ಗಮನ ಕೊಡುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಶ್ರೀ ಆರ್ಥೋ ವೈದ್ಯಕೀಯ ನಿರ್ದೇಶಕ ಡಾ.ಐ. ದೇವಗೌಡ ತಿಳಿಸಿದರು. ನಗರದ ಮಚ್ಛೆ ಕೆಎಸ್‌ಆರ್‌ಪಿ ಮೈದಾನದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಕುಟುಂಬಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ಯಾಲ್ಸಿಯಂಯುಕ್ತ ಪೌಷ್ಟಿಕಾಂಶ ಕೊರತೆಯಿಂದ ಬೆನ್ನುನೋವು, ಮೊಣಕಾಲು ನೋವು, ನರದೌರ್ಬಲ್ಯ, ಅಶಕ್ತತನದಂತಹ ಹಲವಾರು ಸಮಸ್ಯೆಗಳು ಉಂಟಾಗುತ್ತವೆ.