ಸಂಕೇಶ್ವರ : ಹಿಡಕಲ್ಲ ಜಲಾಶಯ ಭರ್ತಿಯಾದರೂ ಇಲ್ಲಿನ ಬಹುತೇಕ ಗ್ರಾಮದ ಜನರಿಗೆ ತಪ್ಪದ ಕುಡಿಯುವ ನೀರಿನ ಬೇಗೆಒಂದು ಕಡೆ ಅತಿವೃಷ್ಟಿ, ನೆರೆ ಹಾವಳಿ ಆತಂಕ ಸೃಷ್ಟಿಸಿದ್ದು, ಹುಕ್ಕೇರಿ ತಾಲೂಕಿನ ಹಿಡಕಲ್ಲ ಜಲಾಶಯ ಭಾಗಶಃ ಭರ್ತಿಯಾಗಿದೆ. ಆದರೂ, ತಾಲೂಕಿನ ಕೆಲವು ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಬೇಗೆ ಮಾತ್ರ ತಪ್ಪುತ್ತಿಲ್ಲ. ಜಲಾಶಯದಲ್ಲಿ ನೀರಿದ್ದರೂ ಕುಡಿಯುವ ನೀರಿಗೆ ಜನರು ಪರದಾಡುವಂತಾಗಿದೆ.