ಅಥಣಿಯಲ್ಲಿ ಕಳೆಗಟ್ಟಿದ ನಾಗಪಂಚಮಿಕನ್ನಡಪ್ರಭ ವಾರ್ತೆ ಅಥಣಿ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಅಥಣಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಯಿತು. ಅಥಣಿ ಸಿದ್ದೇಶ್ವರ ದೇವಸ್ಥಾನದ ಹತ್ತಿರದ ನಾಗ ಮಂದಿರದಲ್ಲಿ ನಾಗದೇವತೆಗೆ ವಿಶೇಷ ಪೂಜೆ, ರುದ್ರಾಭಿಷೇಕ, ಹಾಲು ಎರೆಯುವ ಮೂಲಕ ಮಹಿಳೆಯರು ಮಕ್ಕಳು ಪೂಜೆ ಸಲ್ಲಿಸಿದರು. ಹೊಸ ಉಡುಗೆಗಳನ್ನು ತೊಟ್ಟು ನಾಗ ದೇವರಿಗೆ ಸಂಪ್ರದಾಯದಂತೆ ಹಾಲೆರೆದು, ಎಳ್ಳು, ಉಂಡಿ, ಕಡುಬು, ಹೋಳಿಗೆ ತಯಾರಿಸಿ ನೈವೇದ್ಯ ಸಮರ್ಪಿಸಿದರು.