ಯಲ್ಲಮ್ಮದೇವಿ, ಅಮ್ಮಣಗಿ ಮಲ್ಲಿಕಾರ್ಜುನ ಜಾತ್ರೆಗೆ ಹೆಚ್ಚುವರಿ ಬಸ್ಯಲ್ಲಮ್ಮಾದೇವಿ ಜಾತ್ರೆ ಜ.6ರಿಂದ 12ರವರೆಗೆ ಹಾಗೂ ಮಲ್ಲಿಕಾರ್ಜುನ ಜಾತ್ರೆ ಜ.13ರಿಂದ 16 ರವರೆಗೆ ಜರುಗಲಿದೆ. ಜಾತ್ರೆಗೆ ಅಥಣಿ, ತೆಲಸಂಗ, ಕಾಗವಾಡ, ಸಾವಳಗಿ, ಬಬಲೇಶ್ವರ, ಮಿರಜ, ಸಾಂಗ್ಲಿ, ಜತ್ತ ಮುಂತಾದ ಸ್ಥಳಗಳಿಂದ ಚಿಕ್ಕೋಡಿ ವಿಭಾಗದ ಅಥಣಿ ಘಟಕದಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದು. ಕೊಕಟನೂರದಿಂದ ನೇರವಾಗಿ ಪುಣೆ, ಮುಂಬೈ, ಬೋರಿವೆಲಿ, ಬಾರಾಮತಿವರೆಗೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದು.