ಸಿಗುತ್ತಿಲ್ಲ ಕನ್ಯೆಯರು: ಮದುವೆಗೆ ವಂಚಿಸುತ್ತಿರುವ ಖದೀಮರುಹವಾಮಾನ ವೈಪರೀತ್ಯ, ಕೃಷಿ ಕೂಲಿಕಾರ್ಮಿಕರ ಕೊರತೆ, ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗದೇ ಸಮಸ್ಯೆಗಳಿಂದ ಬಳಲಿದ ಅನ್ನದಾತನಿಗೆ ಪುತ್ರರ ಮದುವೆ ಎಂಬ ಪೆಡಂಭೂತವಾಗಿ ಕಾಡತೊಡಗಿದೆ. ಕೃಷಿ ಕಾಯಕ ಮಾಡುವ ಯುವಕರನ್ನು ವರಿಸಲು ಯುವತಿಯರು ನಿರಾಕರಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ದೊಡ್ಡ ಸಾಮಾಜಿಕ ಸಮಸ್ಯೆ ಸೃಷ್ಟಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರ ಗ್ಯಾಂಗ್ ಹಣ ಪಡೆದು ನಕಲಿ ಮದುವೆ ಮಾಡಿಸಿ ರೈತರನ್ನು ವಂಚಿಸುತ್ತಿರುವ ವ್ಯವಸ್ಥಿತ ಜಾಲ ಕಾರ್ಯನಿರ್ವಹಿಸುತ್ತಿದೆ.