ನೀರಿನ ಕೊರತೆ ಎದುರಿಸುವ ಭವಿಷ್ಯದ ಪೀಳಿಗೆನೀರು ಜೀವನಕ್ಕೆ ಅತ್ಯಗತ್ಯ. ಆದರೆ, ಹವಾಮಾನ ಬದಲಾವಣೆ, ಮಾಲಿನ್ಯ, ನೀರಿನ ಅತಿಯಾದ ಬಳಕೆ ಮತ್ತು ದುರುಪಯೋಗದಿಂದಾಗಿ ಅದರ ಲಭ್ಯತೆ ಮತ್ತು ಗುಣಮಟ್ಟ ಅಪಾಯದಲ್ಲಿದೆ. ನಾವು ಈಗಲೇ ಕ್ರಮ ಕೈಗೊಳ್ಳದಿದ್ದರೇ ಭವಿಷ್ಯದ ಪೀಳಿಗೆಗಳು ತೀವ್ರ ನೀರಿನ ಕೊರತೆ ಎದುರಿಸಬೇಕಾಗುತ್ತದೆ ಎಂದು ರಷ್ಯನ್ ಅಕಾಡೆಮಿಯ ಪೆಟ್ರೊಜವೋಡ್ಸ್ಕ್ ವಾಟರ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಡಾ.ಫಿಲಾಟೊವ್ ನಿಕೋಲೈ ನಿಕೊಲಾಯೆವಿಚ್ ಹೇಳಿದರು.