ಇಂದು ಅಥಣಿಯಲ್ಲಿ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಮಂಗಳವಾರ ನಡೆದ ಪಂಚಮಸಾಲಿ ಸಮಾಜದ ಹಾಕ್ಕೋತಾಯ ಪ್ರತಿಭಟನೆಯಲ್ಲಿ ಪೊಲೀಸರು ಲಾಟಿ ಪ್ರಹಾರ ಮಾಡಿದ್ದು, ಅನೇಕ ಸಮಾಜ ಬಂಧುಗಳ ಮೇಲೆ ಹಲ್ಲೆ ಮಾಡಿ, ಸಮಾಜದ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಡಿ.12ರಂದು ಅಥಣಿ ಪಟ್ಟಣದಲ್ಲಿ ಪಂಚಮಸಾಲಿ ಸಮಾಜ ಬಂಧುಗಳಿಂದ ಪ್ರತಿಭಟನೆ ಕೈಗೊಳ್ಳಲಾಗಿದೆ ವೀರಶೈವ ಪಂಚಮಶಾಲಿ ಸಮಾಜದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಧರೆಪ್ಪ ಟಕ್ಕಣ್ಣವರ ಹೇಳಿದರು.