ಹಾರ ತುರಾಯಿ ಬದಲು ಪುಸ್ತಕ ಸಂಗ್ರಹಿಸಿ ಬಡ ಮಕ್ಕಳಿಗೆ ಹಂಚಿಹೊಸಕೋಟೆ: ಶಾಸಕ ಶರತ್ ಬಚ್ಚೇಗೌಡ ಅವರ ಹುಟ್ಟುಹಬ್ಬದಂದು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹಾರ, ಶಾಲು, ಪೇಟ ತೊಡಿಸಿ ಶುಭಾಶಯ ಕೋರುವ ಬದಲು ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ನೀಡುವಂತೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ 80 ಸಾವಿರಕ್ಕೂ ಅಧಿಕ ನೋಟ್ ಪುಸ್ತಕಗಳು ಸಂಗ್ರಹವಾಗಿದ್ದವು.