ವೃಷಭಾವತಿ ಯೋಜನೆ ಟೀಕಾಕಾರರಿಗೆ ತಿರುಗೇಟುದಾಬಸ್ಪೇಟೆ: ವೃಷಭಾವತಿ ವ್ಯಾಲಿ ಯೋಜನೆಯನ್ನು ಶಾಸಕ ಸುರೇಶ್ಗೌಡರು, ಬಿಜೆಪಿ ಸರ್ಕಾರದ ಯೋಜನೆ, ಅಂದಿನ ಸಣ್ಣ ನೀರಾವರಿ ಇಲಾಖೆ ಸಚಿವರಾಗಿದ್ದ ಮಾಧುಸ್ವಾಮಿ ಘೋಷಣೆ ಮಾಡಿದ ಯೋಜನೆ ಎನ್ನುತ್ತಾರೆ. ಆದರೆ, ನೆಲಮಂಗಲದಲ್ಲಿ ಅವರ ಶಿಷ್ಯರನ್ನು ಈ ಯೋಜನೆ ವಿರುದ್ಧ ಹೋರಾಟಕ್ಕೆ ಬಿಟ್ಟು ಯೋಜನೆ ವಿರುದ್ಧ ಅಪಪ್ರಚಾರ ಮಾಡಿಸುತ್ತಿದ್ದಾರೆ. ಇದು ಸರಿಯೇ? ವೃಷಭಾವತಿ ವ್ಯಾಲಿ ಯೋಜನೆ ರೈತ ಪರ, ಎಂದಿಗೂ ಯೋಜನೆ ನಿಲ್ಲುವುದಿಲ್ಲ ಎಂದು ಯೋಜನೆಯ ಟೀಕಾಕಾರರಿಗೆ ನೆಲಮಂಗಲ ಶಾಸಕ ಶ್ರೀನಿವಾಸ್ ಸದನದಲ್ಲಿ ತಿರುಗೇಟು ನೀಡಿದ್ದಾರೆ.