ಕೊಂಗಾಡಿಯಪ್ಪ ದೊಡ್ಡಬಳ್ಳಾಪುರದ ಗಾಂಧಿ!ದೊಡ್ಡಬಳ್ಳಾಪುರ: ಕೈಮಗ್ಗಗಳಲ್ಲಿ ದುಡಿಯುತ್ತಿದ್ದ ನೇಕಾರರಿಗೆ 1932ರಲ್ಲೇ ವಿದ್ಯುತ್ ಸೌಲಭ್ಯ ದೊರೆಯುವಂತೆ ಮಾಡಿ, ನೇಕಾರರ ಆರ್ಥಿಕ ಸ್ಥಿತಿಗತಿ ಸುಧಾರಣೆಗೆ ಶ್ರಮಿಸಿದ ಕೊಂಗಾಡಿಯಪ್ಪ ದಾನಿಗಳ ನೆರವಿನಿಂದ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ, ಪಶು ವೈದ್ಯಶಾಲೆ ಇತ್ಯಾದಿಗಳನ್ನು ಪ್ರಾರಂಭಿಸಲು ನೆರವಾದರು. ಅವರ ಉದಾತ್ತ ಚಿಂತನೆಗಳು ಇಂದಿನ ಪೀಳಿಗೆಗೆ ದಾರಿದೀಪ ಎಂದು ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್ ಹೇಳಿದರು.